Sunday, August 2, 2026

BDA Apartments

Home Front Page ಶಾಸಕರ ಬೆಂಬಲ ಕ್ರೂಢೀಕರಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ- ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು

ಶಾಸಕರ ಬೆಂಬಲ ಕ್ರೂಢೀಕರಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ- ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು

ಬೆಂಗಳೂರು,ಜುಲೈ,2,2024 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿದ್ದ ಚಂದ್ರಶೇಖರ ಸ್ವಾಮೀಜಿಗೆ ಸಚಿವ ಹೆಚ್.ಸಿ ಮಹದೇವಪ್ಪ ಪರೋಕ್ಷ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  ಸಿಎಂ ಅವರಾಗಬೇಕು ಇವರಾಗಬೇಕು ಎನ್ನಲು ಅದೇನು ಕಡ್ಲೇಪುರಿನಾ..?  ಬೊಗಸೆ ಬೊಗಸೆ ಎತ್ತಿಕೊಡೋಗೆ ಅದೇನು ಕಡ್ಲೇಪುರಿನಾ…? ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರ ಬೆಂಬಲದಿಂದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಶಾಸಕರ ಬೆಂಬಲ ಕ್ರೂಢೀಕರಿಸಿ ಸಿಎಂ ಆಗಿದ್ದಾರೆ ಪ್ರಜಾಪ್ರಭುತ್ವದಲ್ಲಿ ಸಿಎಂ ಆಯ್ಕೆ ನನ್ನ ಕೈಯಲ್ಲೂ ಇಲ್ಲ ಧರ್ಮಗುರುಗಳ ಕೈಯಲ್ಲೂ ಇಲ್ಲ. ಸಿದ್ದರಾಮಯ್ಯರನ್ನ ನೇರವಾಗಿ ಸಿಎಂ ಆಗಿ ಪಕ್ಷ ಆಯ್ಕೆ ಮಾಡಿಲ್ಲ. ಶಾಸಕರ ಬೆಂಬಲದಿಂದ ಆಯ್ಕೆ ಮಾಡಿದ್ದಾರೆ  ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.

Key words: MLAs, support, CM, Minister, HC Mahadevappa