ರಾಹುಲ್ ಗಾಂಧಿಯದ್ದು ಆಧಾರ ರಹಿತ ಭಾಷಣ:  ಸಂಸತ್ ಘನತೆಗೆ ಧಕ್ಕೆ- ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ, 2,2024 (www.justkannada.in):  ಹಿಂದೂ ಎಂದು ಹೇಳುವವರು ದ್ವೇಷ ಬಿತ್ತುತ್ತಾರೆ ಎಂದು ಹೇಳಿಕೆ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಸದನದಲ್ಲಿ ರಾಹುಲ್ ಗಾಂಧಿ ಭಾಷಣ ಆಧಾರ ರಹಿತವಾದುದ್ದು.  ಬಿಜೆಪಿ ವಿರುದ್ದ ಸುಳ್ಳುಆರೋಪ  ಮಾಡಿದ್ದಾರೆ. ರಾಹುಲ್ ಗಾಂಧಿ ಸಂಸತ್ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು.

ಚುನಾವಣೆ ಸಮಯದಲ್ಲೂ ಸುಳ್ಳು ಹೇಳೀ ಓಡಾಡಿದರು.  ರಾಹುಲ್ ಗಾಂಧಿ ಹಿಂದೂಗಳ ತೇಜೋವಧೆ ಮಾಡಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ರಾಹುಲ್  ಗಾಂಧಿ ಇದಕ್ಕಾಗಿ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದರು.

Key words: Rahul Gandh, speech, dignity,  Parliament,  BY Vijayendra