Tuesday, September 22, 2026

BDA Apartments

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯಗೆ ನಿರ್ಮಲಾ...
Home Front Page ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯಗೆ ನಿರ್ಮಲಾ ಸೀತಾರಾಮನ್ ಪತ್ರ: ಸಿಎಂ ಉತ್ತರವೇನು..?

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯಗೆ ನಿರ್ಮಲಾ ಸೀತಾರಾಮನ್ ಪತ್ರ: ಸಿಎಂ ಉತ್ತರವೇನು..?

ಬೆಂಗಳೂರು,ಜೂನ್,19,2024 (www.justkannada.in):  ಜೂನ್ 22 ರಂದು ಬಜೆಟ್ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರ ಬರೆದಿದ್ದಾರೆ.

ಜೂನ್ 22 ರಂದು ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಪರವಾಗಿ ಭಾಗವಹಿಸುವಂತೆ  ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದು ಆಹ್ವಾನಿಸಿದ್ದಾರೆ.ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯಗೆ ನಿರ್ಮಲಾ...

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್  ಪತ್ರಕ್ಕೆ ಪತ್ರದ ಮೂಲಕ ಸಹಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಸಭೆಯಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು ಜೂನ್ 22 ರಂದು ಪೂರ್ವ ನಿಯೋಜಿತ ಕಾರ್ಯಕ್ರಮವಿದೆ. ಹಾಗಾಗಿ ನಾನು ಮೀಟಿಂಗ್ ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ.  ನನ್ನ ಬದಲು ನನ್ನ ಸಂಪುಟದ ಸಹದ್ಯೋಗಿ ಭಾಗಿಯಾಗುತ್ತಾರೆ.  ಸಚಿವ ಕೃಷ್ಣಬೈರೇಗೌಡ ಭಾಗಿಯಾಗುತ್ತಾರೆ  ಎಂದು ಉತ್ತರ ನೀಡಿದ್ದಾರೆ.

Key words: Nirmala Sitharaman, letter, CM Siddaramaiah