Tuesday, September 22, 2026

BDA Apartments

ಜೂ.10 ರಿಂದ ಮೂರು ದಿನಗಳ ಕಾಲ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ BD...
Home Front Page ಜೂ.10 ರಿಂದ ಮೂರು ದಿನಗಳ ಕಾಲ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ.

ಜೂ.10 ರಿಂದ ಮೂರು ದಿನಗಳ ಕಾಲ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ.

ಮೈಸೂರು,ಜೂನ್,7,2024 (www.justkannada.in): ಭಾರತೀಯ ಭಾಷಾ ಸಂಸ್ಥಾನವು ದಿನಾಂಕ ಇದೇ ಜೂನ್ 10 ರಿಂದ ಜೂನ್ 12ರವರೆಗೆ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ (ಸಿಸಿಎಲ್ಐ-24) ವನ್ನು ಹಮ್ಮಿಕೊಂಡಿದೆ.

ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ ಜೂನ್ 10 ರಂದು ಬೆಳಗ್ಗೆ 10:00 ರಿಂದ 11:30ರವರೆಗೆ ಸಂಸ್ಥೆಯ ಪ್ರಿವ್ಯೂ ಥಿಯೇಟರ್‌ನಲ್ಲಿ ಜರುಗಲಿದೆ.

ಪ್ರೊ. ಉದಯ ನಾರಾಯಣ ಸಿಂಗ್, ಡೀನ್, ಕಲಾ ನಿಕಾಯ ಹಾಗೂ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಅಮಿಟಿ ವಿಶ್ವವಿದ್ಯಾಲಯ, ಗುರ್ಗಾಂವ್ ಇವರು ಮುಖ್ಯ ಅತಿಥಿಗಳಾಗಿದ್ದು ಈ ಸಮ್ಮೇಳನದ  ಉದ್ಘಾಟನಾ ಭಾಷಣವನ್ನು ನೆರವೇರಿಸಲಿದ್ದಾರೆ. ಸಮ್ಮೇಳನದ ಗೌರವಾನ್ವಿತ ಅತಿಥಿಗಳಾಗಿ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರೊ. ಶ್ರೀನಿವಾಸ ವರಖೇಡಿ ಉಪಸ್ಥಿತರಿರವರು.ಜೂ.10 ರಿಂದ ಮೂರು ದಿನಗಳ ಕಾಲ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ la...

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ.ಶೈಲೇಂದ್ರ ಮೋಹನ್ ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

Key words: National Conference, Classical, Languages,India, mysore