Monday, September 21, 2026

BDA Apartments

ಟಿ-20 ಕ್ರಿಕೆಟ್: ಇಂದು ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ 2ನೇ ಟೆಸ್ಟ್ BDA JK_Adv BDA Adv
Home Front Page ಟಿ-20 ಕ್ರಿಕೆಟ್: ಇಂದು ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ 2ನೇ ಟೆಸ್ಟ್

ಟಿ-20 ಕ್ರಿಕೆಟ್: ಇಂದು ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ 2ನೇ ಟೆಸ್ಟ್

ಮೊಹಾಲಿ, ಸೆಪ್ಟೆಂಬರ್ 18, 2019 (www.justkannada.in): ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಮುಖಾಮುಖೀ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ.

ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿತ್ತು. ಆದರೆ ಮೊಹಾಲಿಯಲ್ಲಿ ಮಳೆಯ ಕಾಟ ಇಲ್ಲ.

ಹಾಗಾಗಿ ಅಭಿಮಾನಿಗಳು ರೋಚಕ ಹೋರಾಟವನ್ನು ಎದುರು ಕಾಣುತ್ತಿದ್ದಾರೆ.
ಈವರೆಗೆ ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿ ಭಾರತ ಒಂದರಲ್ಲೂ ಗೆದ್ದಿಲ್ಲ. ಆದರೆ ಮೊಹಾಲಿ ಅಂಗಳದಲ್ಲಿ ಭಾರತವೇ ಫೇವರಿಟ್‌ ಆಗಿದೆ.