Thursday, August 6, 2026

BDA Apartments

Home Front Page ಜ್ಞಾನಬುತ್ತಿಯಿಂದ ಗ್ರಾಮ ಆಡಳಿತ ಅಧಿಕಾರಿ ಮತ್ತು ಪಿಡಿಒ ಪರೀಕ್ಷೆಗಳಿಗೆ ಉಚಿತ ತರಬೇತಿ.

ಜ್ಞಾನಬುತ್ತಿಯಿಂದ ಗ್ರಾಮ ಆಡಳಿತ ಅಧಿಕಾರಿ ಮತ್ತು ಪಿಡಿಒ ಪರೀಕ್ಷೆಗಳಿಗೆ ಉಚಿತ ತರಬೇತಿ.

ಮೈಸೂರು,ಏಪ್ರಿಲ್,30,2024 (www.justkannada.in):  ನೀವು ಉದ್ಯೋಗ ನಿರೀಕ್ಷೆಯಲ್ಲಿದ್ದೀರಾ.? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ..? ಹಾಗಿದ್ದರೆ ಮೈಸೂರಲ್ಲಿ ನಿಮಗಿದೆ ತರಬೇತಿಯ ಅವಕಾಶ.  ಹೌದು, ನಾಲ್ಕು ದಶಕದಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿರುವ ಜ್ಞಾನಬುತ್ತಿ ಸಂಸ್ಥೆ ಹೊಸ ತರಗತಿಗಳನ್ನು ಆರಂಭಿಸಲು ಮುಂದಾಗಿದೆ.

ಕರ್ನಾಟಕ ಸರ್ಕಾರ ನಡೆಸಲಿರುವ ಗ್ರಾಮ ಆಡಳಿತ ಅಧಿಕಾರಿ (ವಿಎಓ) ಮತ್ತು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ಉಚಿತ ತರಬೇತಿಯನ್ನು ನೀಡಲು ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ನಿರ್ಧರಿಸಿದೆ.

ಆಸಕ್ತರು ದಿನಾಂಕ: 8-05-2024 ರೊಳಗಾಗಿ ಪ್ರತಿದಿನ ಸಂಜೆ 5:30 ರಿಂದ 7:30 ರವರೆಗೆ ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಹೆಚ್‌. ಬಾಲಕೃಷ್ಣ (9448117455) ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.  ವಿವರಗಳಿಗೆ ಸಂಯೋಜಕರಾದ ಸಿಕೆ. ಕಿರಣ್‌ ಕೌಶಿಕ್‌(9972830857) ಮತ್ತು ಕೆ.ವೈ ನಾಗೇಂದ್ರ (8296788251) ಅವರನ್ನು ಸಂಪರ್ಕಿಸಬಹುದಾಗಿದೆ.

Key words: Free Coaching, mysore,  Jnanbutti