Sunday, September 6, 2026

BDA Apartments

Home Front Page ಮೋದಿ  ಮತ್ತೊಮ್ಮೆ ಪ್ರದಾನಿ ಆಶಯದೊಂದಿಗೆ  ʼ ಭಾರತ್ ಬಚಾವೋʼ  ಸೈಕಲ್‌  ಯಾತ್ರೆ .!

ಮೋದಿ  ಮತ್ತೊಮ್ಮೆ ಪ್ರದಾನಿ ಆಶಯದೊಂದಿಗೆ  ʼ ಭಾರತ್ ಬಚಾವೋʼ  ಸೈಕಲ್‌  ಯಾತ್ರೆ .!

Mysore, cycle Yathree, Modi, support, bjp

 

ಮೈಸೂರು, ಏ.24, 2024  : (www.justkannada.in news )  ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರದಾನ ಮಂತ್ರಿ ಯಾಗಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಧಾರವಾಡ ಮೂಲದ ಯುವಕ ಭರತ್ ತವನೂರ ಸಾವಿರಾರು ಕೀ.ಮೀ. ʼ ಭಾರತ್ ಬಚಾವೋ ʼ  ಸೈಕಲ್ ಯಾತ್ರೆ ಮಾಡುತ್ತಿದ್ದಾರೆ.

34 ವರ್ಷದ ಯುವಕ ಭರತ್‌, ಧಾರವಾಡ ಜಿಲ್ಲೆಯ SSK ಕಾಲೇಜಿನಲ್ಲಿ ಪಿ.ಯು.ಸಿ ಮಾಡಿದ್ದು, ಮೂಲತಃ ಹುಬ್ಬಳ್ಳಿ ಧಾರವಾಡ ಜಿಲ್ಲೆಯವರು.  ಬೆಳಾಗಾವಿಯಿಂದ ಸೈಕಲ್‌ ಯಾತ್ರೆ ಪ್ರಾರಂಬಿಸಿ ಬಾಗಲಕೋಟೆ, ಬಿಜಾಪುರ, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ದಾವಣಗೆರೆ,ಚಿತ್ರದುರ್ಗ, ತುಮಕೂರು, ಬೆಂಗಳೂರು, ಉತ್ತರ, ದಕ್ಷಿಣ, ಚಿಕ್ಕಬಳ್ಳಾಪುರ ಮೂಲಕ ಇದೀಗ ಮೈಸೂರಿಗೆ ಆಗಮನ.

ಫೆಬ್ರವರಿ 18 ರಂದು ಪ್ರಾರಂಭ ಮಾಡಿದ ಈ ಸೈಕಲ್‌ ಯಾತ್ರೆ,    ಸುಮಾರು 2200 ಕೀಮೀ ಕ್ರಮಿಸಿದ್ದಾರೆ.  ಆ ಮೂಲಕ ಮತ್ತೊಮ್ಮೆ ದೇಶದ ಪ್ರಧಾನಮಂತ್ರಿ ಯಾಗಿ ನರೇಂದ್ರ ಮೋದಿಯವರು ಅಯ್ಕೆಯಾಗಲೆಂದು ಅವರು ಆಶಿಸಿದ್ದಾರೆ.

ಮೈಸೂರಿನ ಭಾ.ಜ.ಪ.ಕಛೇರಿ ಗೆ ಆಗಮಿಸಿದ ಭರತ್ ಅವರನ್ನು ಶಾಸಕ ಟಿ.ಎಸ್.ಶ್ರೀ ವತ್ಸ.ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮೈಸೂರು ನಗರ ಉಪಾಧ್ಯಕ್ಷ ಜೋಗಿ ಮಂಜು, ಕೆ.ಅರ್.ಕ್ಷೇತ್ರ ಯುವಮೊರ್ಚಾ ಅಧ್ಯಕ್ಷ ನಿಶಾಂತ್,ಕಿಶೋರ್,ಮಣಿರತ್ನಂ ರವರು ಸ್ವಾಗತಿಸಿದರು.

key words : Mysore, cycle Yathree, Modi, support, bjp