Thursday, August 6, 2026

BDA Apartments

Home Election 2024 ಬಿಜೆಪಿ ಕುಟುಂಬದಲ್ಲಿ ಸೌಜನ್ಯ ಇಲ್ಲ: ಹೀಗಾಗಿ ಕಾಂಗ್ರೆಸ್ ಸೇರಿದೆ –ಸಂಗಣ್ಣ ಕರಡಿ.

ಬಿಜೆಪಿ ಕುಟುಂಬದಲ್ಲಿ ಸೌಜನ್ಯ ಇಲ್ಲ: ಹೀಗಾಗಿ ಕಾಂಗ್ರೆಸ್ ಸೇರಿದೆ –ಸಂಗಣ್ಣ ಕರಡಿ.

ಕೊಪ್ಪಳ,ಏಪ್ರಿಲ್,18,2024 (www.justkannada.in): ಬಿಜೆಪಿ ಕುಟುಂಬದಲ್ಲಿ ಸೌಜನ್ಯ ಇಲ್ಲ.  ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಗಣ್ಣ ಕರಡಿ, ಕಾಂಗ್ರೆಸ್ ನವರು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಬಿಜೆಪಿ ಟೀಕೆ ಟಿಪ್ಪಣಿಗಳಿಗೆ ಸ್ವಾಗತ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಬಿಜೆಪಿ ತೊರೆದೆ. ಯಾವುದೇ ಹುದ್ದೆ ಪಡೆಯಲು ಕಾಂಗ್ರೆಸ್ ಗೆ ಹೋಗಿಲ್ಲ. ಟಿಕೆಟ್ ಸಿಗದಿರುವ ಕಾರಣ ನಾನು ಬಿಜೆಪಿ ತೊರೆದಿಲ್ಲ, ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲ ಅನಿಸಿತು. ಬಿಜೆಪಿಯ ನಾಯಕರು ಸಂಘಟನೆ ಮಾಡುವ ವಿಚಾರ, ಅಭಿವೃದ್ಧಿ ವಿಚಾರ ಕೇಳಲಿಲ್ಲ. ಬಿಜೆಪಿಗರು ಈ ಭಾಗದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿಲ್ಲ ಮೋದಿ ಹೆಸರಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ. ಬಿಜೆಪಿ ನಾಯಕರ ನಡವಳಿಕೆ ಬೇಸರ ತರಿಸಿತು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬೇಡಿಕೆ ಇಲ್ಲದೇ ಸೇರಿರುವೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಲು ಸಿಎಂಗೆ ಮನವಿ ಮಾಡಿರುವೆ. ಕೊಪ್ಪಳ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ ಎಂದರು.

Key words: no- courtesy, BJP, Sanganna Karadi