Sunday, September 20, 2026

BDA Apartments

CET ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ BDA JK_Adv BDA Adv
Home Front Page CET ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ.

CET ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ.

ಬೆಂಗಳೂರು,ಮಾರ್ಚ್,26,2024, (www.justkannada.in): ಯುಜಿ ಸಿಇಟಿ  ಪರೀಕ್ಷಾ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ್ದು ಏಪ್ರಿಲ್ 18 ಮತ್ತು 19 ರಂದು ಪರೀಕ್ಷೆ ನಡೆಯಲಿದೆ.

ಯುಜಿಸಿಇಟಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳ ಮಾಹಿತಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಸೂಚನೆ ನೀಡಿದೆ. ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಘನ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ದಿನಾ೦ಕ 18.04.2024 ಮತ್ತು 19.04.2024 ಯುಜಿ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.CET ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ exam

ರಾಜ್ಯದ ಎಲ್ಲಾ ಜಿಲ್ಲೆ / ತಾಲ್ಲೂಕುಗಳಲ್ಲಿ ಪರೀಕ್ಷೆಯನ್ನು ನಡೆಸಲು ಅಗತ್ಯವಿರುವ ಮೂಲಭೂತ ಸೌಕರ್ಯ ಇರುವ ಸರ್ಕಾರಿ / ಅನುದಾನಿತ | ಅನುದಾನರಹಿತ ಶಾಲೆಗಳನ್ನು ಪರೀಕ್ನಾ ಕೇಂದ್ರಗಳಾಗಿ ಗುರುತಿಸಿ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವರಿಗೆ ನೇರವಾಗಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

Key words: CET,exam, announced.