Tuesday, September 22, 2026

BDA Apartments

ನಾನು ಸೋಮಣ್ಣ ಪರ ಕೆಲಸ ಮಾಡಲ್ಲ- ಬಿಎಸ್ ವೈ ವಿರುದ್ದ ಜೆ.ಸಿ ಮಾಧುಸ್ವಾಮಿ ಅಸಮಾಧ...
Home Front Page ನಾನು ಸೋಮಣ್ಣ ಪರ ಕೆಲಸ ಮಾಡಲ್ಲ- ಬಿಎಸ್ ವೈ ವಿರುದ್ದ ಜೆ.ಸಿ ಮಾಧುಸ್ವಾಮಿ ಅಸಮಾಧಾನ.

ನಾನು ಸೋಮಣ್ಣ ಪರ ಕೆಲಸ ಮಾಡಲ್ಲ- ಬಿಎಸ್ ವೈ ವಿರುದ್ದ ಜೆ.ಸಿ ಮಾಧುಸ್ವಾಮಿ ಅಸಮಾಧಾನ.

ತುಮಕೂರು, ಮಾರ್ಚ್,15,2024(www.justkannada.in): ಲೋಕಸಭಾ ಚುನಾವಣೆಗೆ ನಾಳೆ ದಿನಾಂಕ ನಿಗದಿಯಾಗಲಿದ್ದು ಈ ಮಧ್ಯೆ ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದವರ ಅಸಮಾಧಾನ ಜೋರಾಗಿದೆ. ಈ ನಡುವೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಜೆ.ಸಿ ಮಾದುಸ್ವಾಮಿ, ನಾನು ವಿ.ಸೋಮಣ್ಣ ಪರ ಕೆಲಸ ಮಾಡಲ್ಲ. ಸೋಮಣ್ಣಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು.

ನನಗೆ ಲೋಕಸಭೆ  ಚುನಾವನೆಗೆ ಸ್ಪರ್ಧಿಸಿ  ಎಂದು ಎರಡು ಮೂರು ಬಾರಿ ಹೇಳಿದ್ದರು. ಲೋಕಸಭೆ ಚುನಾವಣೆಗೆ ಸಿದ್ದರಾಗಿ ಎಂದು ಹೇಳಿದ್ದರು.  ಆದರೆ ನನಗೆ ಟಿಕೆಟ್ ಕೊಡಿಸಲು ಬಿಎಸ್ ಯಡಿಯೂರಪ್ಪ ಹೋರಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಸೋಮಣ್ಣ ಪರ ಕೆಲಸ ಮಾಡಲ್ಲ maduswamy

ಇಲ್ಲೇ ಇರಬೇಕಾ  ಎಂಬ ಚಿಂತೆ ಮೂಡುತ್ತಿದೆ. ಬಿಜೆಪಿಯಲ್ಲಿರುವುದು ಸೇಫ್ ಅಲ್ಲ.  ಬಿಎಸ್ ವೈ ನಮ್ಮನ್ನೆಲ್ಲಾ ಬಲಿಕೊಟ್ಟರು.  ಸೋಮಣ್ಣನ ನಾಲಿಗೆಗೆ ಹೆದರಿ ಟಿಕೆಟ್ ಕೊಟ್ಟಿದ್ದಾರೆ. ಅಪ್ಪಮಕ್ಕಳಿಗೆ ಸ್ವಹಿತಾಸಕ್ತಿಯೇ ಮುಖ್ಯ  ಎಂದು ಜೆಸಿ ಮಾಧುಸ್ವಾಮಿ ಕಿಡಿಕಾರಿದರು.

Key words: tumakur- I will not –work-Somanna-J.C Madhuswamy