Sunday, November 8, 2026

Dasara Wishes

Happy Dasara
Home Front Page ಪೋಕ್ಸೋ ಪ್ರಕರಣ: ಬಿಎಸ್ ವೈ ಹೆಸರಿಗೆ ಕಳಂಕ ತರುವ ಕೆಲಸ-ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ಪೋಕ್ಸೋ ಪ್ರಕರಣ: ಬಿಎಸ್ ವೈ ಹೆಸರಿಗೆ ಕಳಂಕ ತರುವ ಕೆಲಸ-ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,15,2024(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇದು ಬಿಎಸ್ ವೈ ಅವರ ಹೆಸರಿಗೆ ಕಳಂಕ ತರುವ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಈಗಾಗಲೇ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ದೂರು ದಾಖಲಾದ ತಕ್ಷಣ ಕ್ರಮ ಕೈಗೊಳ್ಳಲಾಗುವುದಿಲ್ಲ. ಜವಾಬ್ದಾರಿಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.ಪೋಕ್ಸೋ ಪ್ರಕರಣ: ಬಿಎಸ್ ವೈ ಹೆಸರಿಗೆ ಕಳಂಕ ತರುವ ಕೆಲಸ-ಮಾಜಿ ಸಿಎಂ ಬಸವರಾಜ ಬೊಮ...

ಗೃಹ ಸಚಿವರು ಹೇಳಿಕೆ ಕೊಟ್ಟಿರುವುದು ಸರಿಯಾಗಿದೆ. ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂದಿದ್ದಾರೆ.  ಬಿಎಸ್ ವೈ ಹೆಸರಿಗೆ ಕಳಂಕ ತರುವ ಕೆಲಸವಾಗಿದೆ.  ಕೇಸ್ ದಾಖಲಿಸುವುದರ ಹಿಂದೆ  ಸದುದ್ದೇಶ ಇಲ್ಲ. ಚುನಾವಣೆ ವೇಳೆ ಈ ರೀತಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

Key words: POCSO-case- BS yeddyurappa-Former CM-Basavaraja Bommai