Friday, August 7, 2026

BDA Apartments

Home Front Page ಯಾವುದೇ ಲಾಬಿಯಿಂದ ನಾನು ಬಿಜೆಪಿ ಟಿಕೆಟ್ ಪಡೆದಿಲ್ಲ- ಯದುವೀರ್

ಯಾವುದೇ ಲಾಬಿಯಿಂದ ನಾನು ಬಿಜೆಪಿ ಟಿಕೆಟ್ ಪಡೆದಿಲ್ಲ- ಯದುವೀರ್

ಮೈಸೂರು,ಮಾರ್ಚ್,15,2024(www.justkannada.in): ನಾನು ಯಾವುದೇ ಲಾಬಿಯಿಂದ ಬಿಜೆಪಿ ಟಿಕೆಟ್ ಪಡೆದಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಳೆದ 1 ವರ್ಷದಿಂದ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇತ್ತು. ಅರಮನೆ ರಾಜ್ಯ ಬಿಜೆಪಿ ಜತೆ ಸದಾ ಸಂಪರ್ಕದಲ್ಲಿತ್ತು. ನನ್ನ ಸಿದ್ದಾಂತ ಅಭಿವೃದ್ದಿ ದೃಷ್ಠಿಕೋನ ನೋಡಿದಾಗ ಬಿಜೆಪಿ ಕಡೆ ಇತ್ತು.

ರಾಜಕಾರಣದ ಆಳ ಅಗಲ ಅರಿತು ರಾಜಕಾರಣಕ್ಕೆ ಬಂದಿದ್ದೇನೆ. ಸಮಾಜದಲ್ಲಿ ಅಭಿವೃದ್ದಿ ತರಬೇಕಾದರೇ ರಾಜಕಾರಣವೇ ಮಾರ್ಗ ಎಂದು ಯದುವೀರ್ ಅವರು ನುಡಿದರು.

Key words: lokasabha-election- mysore-kodagu-bjp-candidate-yaduveer