Sunday, September 20, 2026

BDA Apartments

ವಿದ್ಯುತ್ ಸ್ಪರ್ಶಿಸಿ ಮೂವರು ಸಾವು… BDA JK_Adv BDA Adv
Home Crime ವಿದ್ಯುತ್ ಸ್ಪರ್ಶಿಸಿ ಮೂವರು ಸಾವು…

ವಿದ್ಯುತ್ ಸ್ಪರ್ಶಿಸಿ ಮೂವರು ಸಾವು…

ಕುಷ್ಟಗಿ,ಸೆ.13,2019(www.justkannada.in):  ವಿದ್ಯುತ್  ಸ್ಪರ್ಶಿಸಿ ಇಬ್ಬರು ಮಕ್ಕಳು ಹಾಗೂ ತಂದೆ ಧಾರುಣವಾಗಿ ಮೃತಪಟ್ಟಿರುವ  ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲ್ಲೂಕಿನ ಚಳಗೇರಿ ನಿವಾಸಿ ಹನುಮಂತ ಬೀರಪ್ಪನವರ್(30) ಮತ್ತು ಪುಟ್ಟ ಮಕ್ಕಳಾದ ಪ್ರಿಯಾಂಕ(4) ಮತ್ತು ಬೀರಪ್ಪ(2) ಮೃತಪಟ್ಟವರು. ಇಂದು ಬೆಳಗ್ಗೆ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕರೆದುಕೊಂಡು ಸೂರ್ಯಕಾಂತಿ ಬೀಜಗಳನ್ನು ತುಂಬಿಕೊಂಡು ಹೊಲದಲ್ಲಿ ರಾಶಿ ಮಾಡಲು ಹನುಮಂತ ಬೀರಪ್ಪನವರ್ ತೆರಳಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಕುರಿತು ಕುಷ್ಟಗಿ ಠಾಣೆ ಪ್ರಕರಣ ದಾಖಲಾಗಿದೆ.

Key words: Three deaths – touching- electricity.