Tuesday, September 22, 2026

BDA Apartments

Home Front Page ಸುಳ್ಳು ಬಿಜೆಪಿಯವರ ಮನೆ ದೇವರು: ವಿಪಕ್ಷ ಅಂದ್ರೆ ಬರೀ ಟೀಕೆ ಮಾಡೋದಾ..? ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಸುಳ್ಳು ಬಿಜೆಪಿಯವರ ಮನೆ ದೇವರು: ವಿಪಕ್ಷ ಅಂದ್ರೆ ಬರೀ ಟೀಕೆ ಮಾಡೋದಾ..? ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಬೆಂಗಳೂರು, ಫೆಬ್ರವರಿ,20,2024(www.justkannada.in): ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ ಎಂದು ಆರೋಪಿಸಿದ ವಿಪಕ್ಷ ಬಿಜೆಪಿಗೆ ತಿರುಗೇಟು ನೀಡುರುವ ಸಿಎಂ ಸಿದ್ದರಾಮಯ್ಯ , ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ, ಅವರು ಸುಳ್ಳು ಹೇಳಿಲ್ಲ. ಆದರೆ ಸುಳ್ಳು ಬಿಜೆಪಿಯವರ ಮನೆ ದೇವರು.  ವಿಪಕ್ಷ ಅಂದ್ರೆ ಬರೀ ಟೀಕೆ ಮಾಡೋದಾ..? ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆಯ ಬಜೆಟ್​ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೇವೆ ಎಂಬುದಾಗಿ ಬಿಜೆಪಿಯವರು ಆರೋಪ ಮಾಡಿದ್ದಾರೆ. ಆದರೆ, ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ, ಅವರು ಸುಳ್ಳು ಹೇಳಿಲ್ಲ. ಬಿಜೆಪಿಯವರು  ಹೇಳುತ್ತಿರುವುದು ಸುಳ್ಳು ಎಂಬುದು ಜನರಿಗೂ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದು ಗುಡುಗಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮದು ಸುಳ್ಳಿನ ಪಕ್ಷವಾದ್ರೆ, ಕಾಂಗ್ರೆಸ್ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನಿಮ್ಮನ್ನು ಕೆಣಕಲು ಹೋಗಲ್ಲ. ನಾವೇನು ಅಂತ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.ಸುಳ್ಳು ಬಿಜೆಪಿಯವರ ಮನೆ ದೇವರು siddaramaiah siddaramaiah 1

ಬರೀ ಸುಳ್ಳು ಹೇಳೋದೆ ಬಿಜೆಪಿಯರವರ ಕೆಲಸನಾ. ಬಜೆಟ್ ನಲ್ಲಿ ಏನಿಲ್ಲಾ ಏನಿಲ್ಲಾ ಅಂದ್ರು. ಬಜೆಟ್ ಪುಸ್ತಕದಲ್ಲಿ ಏನಿದೆ ಅಂತಾ ನಿಮಗೆ ಗೊತ್ತಾ..?  ವಿಪಕ್ಷ ಅಂದ್ರೆ ಬರೀ ಟೀಕೆ ಮಾಡೋದಾ..?  ರಾಜ್ಯದ 7ಕೋಟಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ ನಾವು ನ್ಯಾಯ ಕೇಳೋದು ತಪ್ಪಾ…?  ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.

ಗ್ಯಾರಂಟಿ ಬಗ್ಗೆ ಏನೇ ಹೇಳಿದ್ರೂ ನಾವು ಕೇರ್ ಮಾಡಲ್ಲ.  ಯುವನಿಧಿ ಯೋಜನೆಗೆ ಹಣ ಕೊಟ್ಟಿದ್ದೇವೆ. ಹಸಿವುಮುಕ್ತ ರಾಜ್ಯ ಮಾಡಲು ಅಕ್ಕಿ ಕೊಡುತ್ತಿದ್ದೇವೆ. 13,352 ಕೋಟಿ ರೂ. ಹಣವನ್ನ ಯುವನಿಧಿಗೆ  ಮೀಸಲಿಟ್ಟಿದ್ದೇವೆ. ನಿಮ್ಮ ಯಾವುದೇ ಬೆದರಿಕೆಗೆ ನಾವು ಬಗ್ಗಲ್ಲ ಎಂದು ಬಿಜೆಪಿ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

Key words: False-BJP- house god- CM -Siddaramaiah