Tuesday, September 22, 2026

BDA Apartments

ಮದುವೆ ಮುಗಿಸಿ ವಾಪಸ್ ಬರುವಾಗ ದುರಂತ: ದಂಪತಿಗಳಿಬ್ಬರು ಸಾವು BDA JK_Adv BDA Adv
Home Crime ಮದುವೆ ಮುಗಿಸಿ ವಾಪಸ್ ಬರುವಾಗ ದುರಂತ: ದಂಪತಿಗಳಿಬ್ಬರು ಸಾವು.

ಮದುವೆ ಮುಗಿಸಿ ವಾಪಸ್ ಬರುವಾಗ ದುರಂತ: ದಂಪತಿಗಳಿಬ್ಬರು ಸಾವು.

ಹಾಸನ, ಫೆಬ್ರವರಿ 19,2024(www.justkannada.in): ಮದುವೆ ಮುಗಿಸಿ ವಾಪಸ್  ಬರುವ ವೇಳೆ ಬೈಕ್ ಗೆ ಕಾರು ಡಿಕ್ಕಿಯಾಗಿ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಚಂದ್ರೇಗೌಡ(52) ಹಾಗೂ ಹೇಮಲತಾ (45) ಮೃತಪಟ್ಟ ದಂಪತಿ. ಚಂದ್ರೇಗೌಡ ಮತ್ತು ಹೇಮಲತಾ ಇಬ್ಬರು  ಉದಯಪುರ ಗ್ರಾಮದಲ್ಲಿ ಮದುವೆ ಮುಗಿಸಿ ಬೈಕ್‌ ನಲ್ಲಿ ಚನ್ನರಾಯಪಟ್ಟಣಕ್ಕೆ ವಾಪಾಸ್ ಆಗುತ್ತಿದ್ದರು. ಈ ವೇಳೆ ತಿರುವಿನಲ್ಲಿ ಹಿಂಬದಿಯಿಂದ ಬೈಕ್‌ ಗೆ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: bike-car-collide- couple- dies