Wednesday, September 30, 2026

BDA Apartments

Home Cinema ವಿಚಾರಣೆಗೆ ಪೊಲೀಸ್ ಠಾಣೆಗೆ ಹಾಜರಾದ ನಟ ದರ್ಶನ್ ಹಾಗೂ ಇತರೆ ಸ್ಟಾರ್ ನಟರು.

ವಿಚಾರಣೆಗೆ ಪೊಲೀಸ್ ಠಾಣೆಗೆ ಹಾಜರಾದ ನಟ ದರ್ಶನ್ ಹಾಗೂ ಇತರೆ ಸ್ಟಾರ್ ನಟರು.

ಬೆಂಗಳೂರು,ಜನವರಿ,12,2024(www.justkannada.in):  ಜೆಟ್ ಲ್ಯಾಗ್  ಪಬ್ ನಲ್ಲಿ ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ ಮಾಡಿದ ಆರೋಪದ ಮೇಲೆ ನೋಟಿಸ್ ನೀಡಿದ ಹಿನ್ನೆಲೆ ಇಂದು ನಟ ದರ್ಶನ್ ಸೇರಿ ಸ್ಯಾಂಡಲ್ ವುಡ್ ನ ಕಲಾವಿದರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಜೆಟ್ ಲ್ಯಾಗ್  ಪಬ್ ನಲ್ಲಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿಯನ್ನು ನಡೆಸಲಾಗಿತ್ತು. ಮಧ್ಯರಾತ್ರಿ 1.30ರ ನಂತರವೂ ಪಾರ್ಟಿ ನಡೆಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ನಿಯಮ ಮೀರಿ, ತಡರಾತ್ರಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿತ್ತು.

ಈ ಸಂಬಂಧ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಡಾಲಿ ಧನಂಜಯ್, ಸಂಗೀತ ನಿರ್ದೇಶ ವಿ.ಹರಿಕೃಷ್ಣ, ತರುಣ್ ಸುಧೀರ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಸೇರಿದಂತೆ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.ವಿಚಾರಣೆಗೆ ಪೊಲೀಸ್ ಠಾಣೆಗೆ ಹಾಜರಾದ ನಟ ದರ್ಶನ್ ಹಾಗೂ ಇತರೆ ಸ್ಟಾರ್ ನಟರು darshan ...

ಈ ಹಿನ್ನಲೆಯಲ್ಲಿ ಇಂದು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಢಾಲಿ ಧನಂಜಯ್, ರಾಕ್ ಲೈನ್ ವೆಂಕಟೇಶ್, ಚಿಕ್ಕಣ್ಣ, ತರುಣ್ ಸುಧೀರ್, ಅಭಿಷೇಕ್ ಅಂಬರೀಶ್ ವಿಚಾರಣೆಗೆ ಒಟ್ಟಾಗಿ ಹಾಜರಾಗಿದ್ದಾರೆ.

Key words: Actor-Darshan – star actors -attended –hearing- police station