ಮೈಸೂರು,ಸೆಪ್ಟಂಬರ್,30,2026 (www.justkannada.in): ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ನೆನಪಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಾಡುಹಳೆಯದಾದರೇನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಜನಪ್ರಿಯ ಚಿತ್ರಗೀತೆಗಳ ಸಂಗೀತ ಸಂಜೆಯನ್ನ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ,
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಟಿಎಸ್ ಫೌಂಡೇಶನ್ ಅಧ್ಯಕ್ಷ ಡಿ ಟಿ ಪ್ರಕಾಶ್, ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ನೆನಪಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಾಡುಹಳೆಯದಾದರೇನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಜನಪ್ರಿಯ ಚಿತ್ರಗೀತೆಗಳ ಸಂಗೀತ ಸಂಜೆಯನ್ನ ಆಯೋಜನೆ ಮಾಡಲಾಗಿದೆ. ನಿರೂಪಕ ಅಜಯ್ ಶಾಸ್ತ್ರಿ ಸಾರಥ್ಯದಲ್ಲಿ ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ವಾದ್ಯ ಸಂಗೀತಗಾರರು ಜನಪ್ರಿಯ ಗಾಯಕರು ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿರುವ ಜನಪ್ರಿಯ ಚಿತ್ರೆಗೀತೆಗಳನ್ನ ಪ್ರಸ್ತುತ ಪಡಿಸಲಿದ್ದಾರೆ. ಪ್ರವೇಶ ಉಚಿತವಿದ್ದು 4:45ರೊಳಗೆ ಕಲಾಪ್ರೇಕ್ಷಕರು ಆಸೀನರಾಗಿರಬೇಕು ಎಂದು ತಿಳಿಸಿದರು.
ಪುಟ್ಟಣ್ಣ ಕಣಗಾಲ್ ಅವರ ಸುಪುತ್ರಿ ವಿದೂಷಿ ತ್ರಿವೇಣಿ ಕಣಗಾಲ್, ಮೊಮ್ಮಗಳು ವಿದೂಷಿ ಗೀತಾಂಜಲಿ ಕಣಗಾಲ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ಧರಾಮಯ್ಯ, ಶಾಸಕರಾದ ಕೆ. ಹರೀಶ್ ಗೌಡ, ಟಿಎಸ್ ಶ್ರೀವತ್ಸ, ಜಿಟಿ. ದೇವೆಗೌಡ, ಜಿಡಿ ಹರೀಶ್ ಗೌಡ, ಮಾಜಿ ಸಚಿವ ಸಾರಾ. ಮಹೇಶ್, ಮಾಜಿ ಶಾಸಕ ಎಲ್. ನಾಗೇಂದ್ರ, ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಮಾಜ ಸೇವಕರಾದ ಕೆ.ರಘುರಾಂ ವಾಜಪೇಯಿ, ನಟರಾಜ ಜೋಯಿಸ್ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಎಂ ಡಿ ಪಾರ್ಥಸಾರಥಿ (ಪಾತಿ), ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿದಂ ಗುರುದತ್, ನಿರೂಪಕ ಅಜಯ್ ಶಾಸ್ತ್ರಿ, ಭಾಗವಹಿಸಿದ್ದರು.






