ಕೇವಲ 6 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿ ದಾಖಲೆ- ಸಚಿವ ದಿನೇಶ್ ಗುಂಡೂರಾವ್.

ಮಂಗಳೂರು,ಜನವರಿ,12,2024(www.justkannada.in): ಕೇವಲ 6 ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನ ಜಾರಿ ಮಾಡಿ ದಾಖಲೆ ಮೆರೆದಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂತಸ ವ್ಯಕ್ತಪಡಿಸಿದರು.

ಸ್ಲೀಪಿಂಗ್ ಸರ್ಕಾರ  ಎಂದು ಬಿಜೆಪಿ ಪೋಸ್ಟರ್ ಗಳನ್ನು ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕೇವಲ 6 ತಿಂಗಳ ಅವಧಿಯಲ್ಲಿ ತಮ್ಮ ಸರ್ಕಾರ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿ ದಾಖಲೆ ಮೆರೆದಿದೆ. ಬೇರೆ ರಾಜ್ಯಗಳಲ್ಲಿ  ಜಾರಿ ಮಾಡಲು ಕನಿಷ್ಟ 2 ರಿಂದ 2ವರ್ಷಗಳಷ್ಟು ಸಮಯ ತೆಗೆದುಕೊಳ್ಳುವವರು. ಅದರೆ ನಿಮಗೆ ಹೇಗೆ ಇಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾಯಿತು ಕೇಂದ್ರದ ಅಧಿಕಾರಿಗಳು ತನ್ನನ್ನು ಕೇಳಿದ್ದಾರೆ, ನೆರೆರಾಜ್ಯಗಳೂ ಕೇಳಿವೆ ಎಂದು ಹೇಳಿದರು.

ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಪ್ರಸಕ್ತ ವರ್ಷ 32 ಸಾವಿರ ಕೋಟಿ ರೂ. ಗಳನ್ನು ತೆಗೆದಿರಿಸಿದೆ, ಮುಂದಿನ ವರ್ಷ 58 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದು  ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: All -guarantees – implemented – just 6 months – Minister -Dinesh Gundurao.