Tuesday, September 15, 2026

BDA Apartments

ರಾಜ್ಯದಲ್ಲಿ ಕೊರೋನಾಗೆ ಓರ್ವ ಬಲಿ- ಸಚಿವ ದಿನೇಶ್ ಗುಂಡೂರಾವ್ ಮಾಹಿತಿ BDA JK_Adv BDA Adv
Home Front Page ರಾಜ್ಯದಲ್ಲಿ ಕೊರೋನಾಗೆ ಓರ್ವ ಬಲಿ- ಸಚಿವ ದಿನೇಶ್ ಗುಂಡೂರಾವ್ ಮಾಹಿತಿ.

ರಾಜ್ಯದಲ್ಲಿ ಕೊರೋನಾಗೆ ಓರ್ವ ಬಲಿ- ಸಚಿವ ದಿನೇಶ್ ಗುಂಡೂರಾವ್ ಮಾಹಿತಿ.

ಬೆಂಗಳೂರು,ಡಿಸೆಂಬರ್,20,2023(www.justkannada.in):  ರಾಜ್ಯದಲ್ಲಿ ಕೊರೋನಾಗೆ ಓರ್ವ ವೃದ್ದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡದ ಸಚಿವ ದಿನೇಶ್ ಗುಂಡೂರಾವ್,  ರಾಜ್ಯದಲ್ಲಿ ಕೊರೋನಾ ಸೋಂಕಿಗೆ 64 ವರ್ಷದ ವೃದ್ದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ನಿವಾಸಿಯಾಗಿದ್ದು, ಮೃತ ವ್ಯಕ್ತಿಗೆ JN.1 ಇದೆಯಾ ಅಂತಾ ಗೊತ್ತಾಗಿಲ್ಲ. ಕೋವಿಡ್ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಂದಿದೆ ಎಂದರು.ರಾಜ್ಯದಲ್ಲಿ ಕೊರೋನಾಗೆ ಓರ್ವ ಬಲಿ dinesh gundurao

ದೇಶದಲ್ಲಿ 20 JN.1 ಪ್ರಕರಣಗಳು ಪತ್ತೆಯಾಗಿದೆ. ಗೋವಾದಲ್ಲಿ 18 ಮಹಾರಾಷ್ಟ್ರ ಕೇರಳದಲ್ಲಿ ತಲಾ 1ಕೇಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇರಲ್ಲ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸದ್ಯಕ್ಕೆ ಯಾವುದೇ ನಿರ್ಬಂಧವಿಲ್ಲ. ಈಗಾಗಲೇ 700 ಕೋವಿಡ್  ಟೆಸ್ಟಿಂಗ್ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Key words: One victim -corona virus – death-state – Ministe-r Dinesh Gundurao