Saturday, September 26, 2026

BDA Apartments

ಮೈಸೂರಿನ RIE ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು BDA JK_Adv BDA Adv
Home Crime ಮೈಸೂರಿನ RIE ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.

ಮೈಸೂರಿನ RIE ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.

ಮೈಸೂರು,ಡಿಸೆಂಬರ್,5,2023(www.justkannada.in): ಕಾಲೇಜು ವಿದ್ಯಾರ್ಥಿಯೊಬ್ಬ ಪ್ಲಾಸ್ಟಿಕ್ ಕವರ್ ನಿಂದ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೈಸೂರಿನ ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE) ಸಂಸ್ಥೆಯ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಅಕ್ಷಜ್ ಮೃತ ವಿದ್ಯಾರ್ಥಿ. ಶಿಕ್ಷಣ ಸಂಸ್ಥೆಯ ವಸತಿ ಗೃಹ-ಕಾವೇರಿ ಬ್ಲಾಕ್ ನ ರೂಂ ನಂ.11ರಲ್ಲಿ ಇಂದು ಸಂಜೆ ಘಟನೆ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿ ಮೂಲತಃ ಹೈದರಾಬಾದ್ ನಿವಾಸಿ. ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಶಂಕಿಸಲಾಗಿದೆ. ಇದಕ್ಕೆ  ಪೂರಕವಾಗಿ ವಿದ್ಯಾರ್ಥಿಯ ಕಾಲಲ್ಲಿ ಬ್ಲೇಡಿನಿಂದ ಕುಯ್ದುಕೊಂಡ ಹಳೆಯ ಗಾಯದ ಕಲೆಗಳು ಪತ್ತೆಯಾಗಿವೆ. ಮೈಸೂರಿನ RIE ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು succide

ನೋಡಲು ದೃಢಕಾಯನಾದ ಈ ವಿದ್ಯಾರ್ಥಿ ಪ್ಲಾಸ್ಟಿಕ್ ಕವರ್ ನಿಂದ  ಮುಖ ಸುತ್ತಿಕೊಂಡು ಅದನ್ನು ಕತ್ತಿಗೆ ಬಿಗಿಯಾಗಿ ಕಟ್ಟಿ ಉಸಿರು ಕಟ್ಟಿಸಿಕೊಂಡು(self strangulation by using plastic cover)   ಮೃತಪಟ್ಟರುವುದು ಹಲವು ಶಂಕೆಗೆ ಎಡೆ ಮಾಡಿದೆ.

Key words: Mysore- Student -commits -suicide