ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್: ಕ್ರಮ ಕೈಗೊಳ್ಳದ ಅಧಿಕಾರಿಗಳು…

ಮೈಸೂರು,ಡಿ,5,2023(www.justkannada.in):  ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ತಲೆ ಎತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರಿನ ಗೋಕುಲಂ ಬಡಾವಣೆ ವಾರ್ಡ್ ನಂ 6 ನಿರ್ಮಲಾ ಕಾನ್ವೆಂಟ್ ಬಳಿ ಹೋಟೆಲ್ ನಿರ್ಮಾಣವಾಗಿದ್ದು ಪ್ರಾರಂಭಕ್ಕೆ ಸಜ್ಜಾಗಿದೆ. ರಾಜಾ ಕಾಲುವೆ ಮೇಲೆ ಹೋಟೆಲ್ ನಿರ್ಮಾಣವಾಗಿದ್ದರೂ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಈಗಾಗಲೇ ಕಟ್ಟಡದ ಮಾಲೀಕ  ಬಾಡಿಗೆ ಫಿಕ್ಸ್ ಮಾಡಿ ಹೋಟೆಲ್ ನಡೆಸಲು ಅನುಮತಿ ನೀಡಿದ್ದಾನೆ. ಆದರೆ  ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

Key words: Bamboo Biryani -Hotel – Raja Canal