Tuesday, September 22, 2026

BDA Apartments

Home Front Page ಎಲ್ಲಾ ಸಿದ್ದತೆಯೊಂದಿಗೆ ಸಮೀಕ್ಷೆ ಮಾಡಿದ್ದೇವೆ: ಯಾಕೆ ಅವೈಜ್ಞಾನಿಕ ವರದಿ ಅಂದ್ರು ಗೊತ್ತಿಲ್ಲ- ಕಾಂತರಾಜು.

ಎಲ್ಲಾ ಸಿದ್ದತೆಯೊಂದಿಗೆ ಸಮೀಕ್ಷೆ ಮಾಡಿದ್ದೇವೆ: ಯಾಕೆ ಅವೈಜ್ಞಾನಿಕ ವರದಿ ಅಂದ್ರು ಗೊತ್ತಿಲ್ಲ- ಕಾಂತರಾಜು.

ಬೆಂಗಳೂರು,ನವೆಂಬರ್,25,2023(www.justkannada.in):  ಎಲ್ಲಾ ಸಿದ್ದತೆಯೊಂದಿಗೆ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ ವರದಿ ಸಿದ್ದಪಡಿಸಿದ್ದೇವೆ. ಆದರೂ ಯಾಕೆ ಅದು ಅವೈಜ್ಞಾನಿಕ ಎಂದು ಆರೋಪಿಸುತ್ತಿದ್ದಾರೆ ಗೊತ್ತಿಲ್ಲ ಎಂದು ಹಿಂದುಳಿದ ವರ್ಗಗಳ  ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ತಿಳಿಸಿದರು.

ಇಂದು ಈ ಕುರಿತು ಮಾತನಾಡಿದ ಕಾಂತರಾಜ್.  ಜಾತಿಗಣತಿ ವರದಿ  ವರದಿ ಬಗ್ಗೆ ಚರ್ಚೆ ನಡೆಯುತ್ತಿರುವ ಕಾರಣ ಸ್ಪಷ್ಟನೆ ನೀಡುತ್ತಿದ್ದೇವೆ. ಮನೆ ಮನೆಗಹೋಗಿ 40 ದಿನಗಳ ಕಾಲ ಸಮೀಕ್ಷ ಮಾಡಿದ್ದೇವೆ. ಸಮೀಕ್ಷೆ  ನಡೆಸಿ 2019 ಸೆ.21ರಂದು ಐಎಎಸ್ ಅಧಿಕಾರಿಗೆ ವರದಿ ಸಲ್ಲಿಸಿದ್ದೇವೆ   ಐಎಎಸ್ ಅಧೀಕಾರಿ ವಸಂತಕುಮಾರ್ ಸದಸ್ಯಕಾರ್ಯದರ್ಶಿಯಾಗಿದ್ದರು.

ಆದರೂ ಏಕೆ ಅವೈಜ್ಞಾನಿಕ ವರದಿ ಎಂಬ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ಎಲ್ಲಾ ಸಿದ್ದತೆಯೊಂದಿಗೆ ಸಮೀಕ್ಷೆ ಮಾಡಿ ವರದಿ ತಯಾರಿಸಿದ್ದೇವೆ. ಜಾತಿಯ ಕಾಲಂ ಆರ್ಥಿಕ ಸಮೀಕ್ಷೆ ಕೂಡ ಇದೆ. ಜನರು ಕೊಟ್ಟ ಮಾಹಿತಿಯನ್ನ  ಬರೆದು ವರದಿ ಸಿದ್ದಮಾಡಲಾಗಿದೆ  ಎಂದು ತಿಳಿಸಿದರು.ಎಲ್ಲಾ ಸಿದ್ದತೆಯೊಂದಿಗೆ ಸಮೀಕ್ಷೆ ಮಾಡಿದ್ದೇವೆ kantharaju

ಮೂಲ ವರದಿ ಕಳ್ಳತನ ಆಗಿದೆಯೇ ಇಲ್ವೋ ಗೊತ್ತಿಲ್ಲ  ಮೂಲ ವರದಿ  ಹಿಂದುಳಿದ ವರ್ಗಗಳ ಆಯೋಗದಲ್ಲೇ ಮೂಲ ಪ್ರತಿ ಭದ್ರವಾಗಿತ್ತು  ಈಗ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಅಂತಿದ್ದಾರೆ.   ವರದಿಗೆ ನಾವ್ಯಾರು ಸಹಿ ಹಾಕುವ ಅಗತ್ಯವಿಲ್ಲ ಎಂದು ತಿಳಿಸಿದರು.

Key words: survey-I don’t know- – unscientific- report- Kantaraju.