Thursday, October 8, 2026

BDA Apartments

Home Crime ಪತಿ, ಪತ್ನಿ ನಡುವೆ ಜಗಳ ಕೊಲೆಯಲ್ಲಿ ಅಂತ್ಯ.

ಪತಿ, ಪತ್ನಿ ನಡುವೆ ಜಗಳ ಕೊಲೆಯಲ್ಲಿ ಅಂತ್ಯ.

ಮಂಡ್ಯ, ಅಕ್ಟೋಬರ್,20,2023(www.justkannada.in):  ಗಂಡ-ಹೆಂಡತಿ ನಡುವೆ ಜಗಳ ನಡೆದು, ಮಗನೊಂದಿಗೆ ಸೇರಿ  ಪತ್ನಿಯು  ಪತಿಯನ್ನ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ   ಮದ್ದೂರು ತಾಲ್ಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಉಮೇಶ್ (45)  ಮಗ ಮತ್ತು ಪತ್ನಿಯಿಂದಲೇ ಹತ್ಯೆಯಾದ ವ್ಯಕ್ತಿ. ಪತ್ನಿ ಸವಿತಾ ಮೂರು ತಿಂಗಳಿಂದ ಗಂಡನನ್ನ ತೊರೆದು ಬೆಂಗಳೂರಿನಲ್ಲಿ ಮಗ ಶಶಾಂಕ್  ಜೊತೆ ವಾಸವಾಗಿದ್ದಳು. ನಿನ್ನೆ ರಾತ್ರಿ ಪಿತೃಪಕ್ಷ ಹಬ್ಬ ಮಾಡಲು ಊರಿಗೆ ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪತಿ ಉಮೇಶ್ ಅವರು ಪತ್ನಿ ಸವಿತಾ ಅವರನ್ನು ಮನೆಯೊಳಗೆ ಸೇರಿಸಿಲ್ಲ.ಪತಿ, ಪತ್ನಿ ನಡುವೆ ಜಗಳ ಕೊಲೆಯಲ್ಲಿ ಅಂತ್ಯ murder

ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಬೆಂಗಳೂರಿನಿಂದ ಮಗ ಶಶಾಂಕ್​ನನ್ನು ಕರೆಸಿಕೊಂಡ ಸವಿತಾ, ಇಬ್ಬರು ಸೇರಿಕೊಂಡು  ದೊಣ್ಣೆಯಿಂದ ಪ ಉಮೇಶ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎನ್ನಲಾಗಿದೆ.

ಘಟನೆ ನಂತರ ಪತ್ನಿ ಸವಿತಾ, ಮಗ ಶಶಾಂಕ್ ಪರಾರಿಯಾಗಿದ್ದು, ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mandya- Fight- between -husband and wife -ends – murder.