Sunday, August 23, 2026

BDA Apartments

Home Front Page ಡಿಕೆ ಶಿವಕುಮಾರ್ ಅಕ್ರಮವಾಗಿ ದುಡ್ಡು ಹೊಡೆದಿದ್ದಾರೆ: ಕೂಡಲೇ ರಾಜೀನಾಮೆ ನೀಡಲಿ-ಕೆ.ಎಸ್ ಈಶ್ವರಪ್ಪ ಆಗ್ರಹ.

ಡಿಕೆ ಶಿವಕುಮಾರ್ ಅಕ್ರಮವಾಗಿ ದುಡ್ಡು ಹೊಡೆದಿದ್ದಾರೆ: ಕೂಡಲೇ ರಾಜೀನಾಮೆ ನೀಡಲಿ-ಕೆ.ಎಸ್ ಈಶ್ವರಪ್ಪ ಆಗ್ರಹ.

ರಾಯಚೂರು,ಅಕ್ಟೋಬರ್,20,2023(www.justkannada.in): ಡಿಕೆ ಶಿವಕುಮಾರ್ ಅಕ್ರಮವಾಗಿ ದುಡ್ಡು ಹೊಡೆದಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಡಿಸಿಎಂ ಹುದ್ದೆಯಲ್ಲಿರಬಾರದು.  ಕೂಡಲೇ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.

ರಾಯಚೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಡಿಸಿಎಂ ಡಿ.ಕೆ ಶಿವಕುಮಾರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಇದಕ್ಕಿಂತ ಇನ್ಯಾವಾ ಸಾಕ್ಷಿ ಬೇಕು. ನೂರಕ್ಕೆ ನೂರು ಡಿಸಿಎಂ ಡಿ.ಕೆ ಶಿವಕುಮಾರ್ ತಪ್ಪಿತಸ್ಥ ಇದ್ದಾರೆ.  ಸದ್ಯ ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನದಲ್ಲಿರಬಾರದು. ಕೂಡಲೇ ರಾಜೀನಾಮೆ ನೀಡಬೇಕು.  ಸಿಬಿಐ ತನಿಖೆಯಾದ ಮೇಲೆ ಮಂತ್ರಿ ಆಗಲಿ ಇಲ್ಲ ಜೈಲಿಗೆ ಹೋಗಲಿ ಎಂದರು.

ಲೋಕಸಭೆ ಚುನಾವಣೆ  ಬಳಿಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರಲ್ಲ.

ಲೋಕಸಭೆ  ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗತ್ತೆ. ದೇಶದಲ್ಲೇ ಕಾಂಗ್ರೆಸ್  ನವರಿಗೆ ಅಧಿಕಾರ ಇರಲಿಲ್ಲ.  ರಾಜ್ಯದಲ್ಲಿ ಈಗ ಗ್ಯಾರಂಟಿ ಅದು, ಇದು ಮೋಸ ಮಾಡಿ ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಡಿಕೆಶಿ ಕೇಸ್ ಬಂದಿದೆ. ಸತೀಶ್ ಜಾರಕಿಹೋಳಿ ಎಷ್ಟು ಜನರನ್ನ ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ. ಸರ್ಕಾರ ಬಿದ್ದೊಗತ್ತೆ ಅನ್ನೊದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

Key words: DK Shivakumar – resign -immediately – KS Eshwarappa -demands.