ATM ಸರ್ಕಾರದ ಭ್ರಷ್ಟಾಚಾರದ ದರ್ಬಾರ್:  ಪೋಸ್ಟರ್  ಬಿಡುಗಡೆ ಮಾಡಿದ ಬಿಜೆಪಿ.

ಬೆಂಗಳೂರು,ಅಕ್ಟೋಬರ್,20,2023(www.justkannada.in):   ರಾಜ್ಯ ಸರ್ಕಾರದ ವಿರುದ್ದ ರಾಜ್ಯ ಬಿಜೆಪಿ ನಾಯಕರು ATM ಸರ್ಕಾರದ ಭ್ರಷ್ಟಾಚಾರದ ದರ್ಬಾರ್ ಎಂಬ ಪೋಸ್ಟರ್ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ, ಶಾಸಕ ರವಿಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ATM ಸರ್ಕಾರದ ಭ್ರಷ್ಟಾಚಾರದ ದರ್ಬಾರ್ ಎಂಬ ಪೋಸ್ಟರ್ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಡಿವಿ ಸದಾನಂದಗೌಡ, ಅಂಬಿಕಾಪತಿ ಕಡೆಯಿಂದ ಕಲೆಕ್ಷನ್ ಆಗುತ್ತಿದೆ. ಅಂಬಿಕಾಪತಿಯೇ ಕಲೆಕ್ಷನ್ ನಾಯಕ.  ಪಂಚರಾಜ್ಯಗಳ ಚುನಾವಣೆಗೆ ಹಣ ಕಲೆಕ್ಷನ್ ಮಾಡುತ್ತಿದ್ದಾರೆ. ದೆಹಲಿಯೇ ಕಲೆಕ್ಷನ್ ಕೇಂದ್ರ ಬಿಂದು . ರಾಹುಲ್ ಗಾಂದಿಯೇ ಹೆಡ್. ಸಿಎಂ,  ಡಿಸಿಎಂ ಕಲೆಕ್ಷನ್ ನಿಂದ ಕುರ್ಚಿ ಉಳಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿಗೆ ಎರಡು ಕಡೆ ಕಲೆಕ್ಷನ್ ಹೋಗುತ್ತಿದೆ. ಡಿಕೆ ಶಿವಕುಮಾರ್ ಕಲೆಕ್ಷನ್  ವೇಣುಗೋಪಾಲ್ ಮೂಲಕ ಹೋಗುತ್ತಿದೆ. ಸುರ್ಜೇವಾಲ ಕಡೆಯಿಂದ ಸಿಎಂ ಸಿದ್ಧರಾಮಯ್ಯ ಕಲೆಕ್ಷನ್ ಹೋಗುತ್ತಿದೆ ಎಂದು ಗುಡುಗಿದರು.

Key words: ATM Govt –Corruption- Durbar- Poster- released – BJP.