Wednesday, October 7, 2026

BDA Apartments

Home Front Page ಕಣ್ಣಿಗೆ ಕಾಣದ ಲೋಕಕ್ಕೆ ಭರವಸೆಯ ಬೆಳಕು: ಬಿಡಿಎ ಅಧ್ಯಕ್ಷರ ಕುರ್ಚಿಯಲ್ಲಿ ಅಂಧ ಬಾಲಕ!

ಕಣ್ಣಿಗೆ ಕಾಣದ ಲೋಕಕ್ಕೆ ಭರವಸೆಯ ಬೆಳಕು: ಬಿಡಿಎ ಅಧ್ಯಕ್ಷರ ಕುರ್ಚಿಯಲ್ಲಿ ಅಂಧ ಬಾಲಕ!

 

ಬೆಂಗಳೂರು, OCT.07,2026: ಸರ್ಕಾರಿ ಕಚೇರಿಯೊಂದರಲ್ಲಿ ಅಧಿಕಾರದ ಗಂಭೀರ ವಾತಾವರಣದ ನಡುವೆ ಮಾನವೀಯತೆಯ ಅಪರೂಪದ ಕ್ಷಣವೊಂದು ಮೂಡಿಬಂದಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಗೆ ಜ್ಯೋತಿ ಸೇವಾ ಸ್ಕೂಲ್ ಫಾರ್ ಬ್ಲೈಂಡ್ನ 65 ದೃಷ್ಟಿಹೀನ ಮಕ್ಕಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಈ ವೇಳೆ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ರಾಹುಲ್ ಎಂಬ ದೃಷ್ಟಿಹೀನ ಬಾಲಕನನ್ನು ತಮ್ಮ ಅಧಿಕೃತ ಕುರ್ಚಿಯಲ್ಲಿ ಕೂರಿಸಿ, ಸಾಂಕೇತಿಕವಾಗಿ *“ಒಂದು ದಿನದ ಬಿಡಿಎ ಅಧ್ಯಕ್ಷ”*ನನ್ನಾಗಿ ಮಾಡಿದರು. ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತ ರಾಹುಲ್‌ನ ಮುಗ್ಧ ನಗು ಇಡೀ ಕಚೇರಿಯ ವಾತಾವರಣವನ್ನೇ ಬದಲಿಸಿತು.

BDA Chairman N.A. Harris jk02_new jk02 new

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಹ್ಯಾರಿಸ್, “ಯಾರೂ ಧೃತಿಗೆಡಬೇಡಿ. ನೀವೂ ಸಮಾಜದ ಪ್ರತಿಯೊಬ್ಬರಂತೆ ಸಮಾನರು. ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರವಿದೆ. ದೃಢಸಂಕಲ್ಪದಿಂದ ಓದಿ, ಉನ್ನತ ಸ್ಥಾನಗಳನ್ನು ಅಲಂಕರಿಸಿ,” ಎಂದು ಆತ್ಮವಿಶ್ವಾಸ ತುಂಬಿದರು.

ಬಿಡಿಎ ಆಯುಕ್ತ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ದೊಡ್ಡ ಕನಸುಗಳನ್ನು ಬೆಳೆಸುವುದು ಭೇಟಿಯ ಉದ್ದೇಶ ಎಂದರು. ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಉಜ್ವಲ ಭವಿಷ್ಯಕ್ಕೆ ಬಿಡಿಎ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

BDA Chairman N.A. Harris student

“ಸರ್ಕಾರಿ ಕಚೇರಿ ಹೇಗಿರುತ್ತದೆ ಎಂಬುದೇ ನಮಗೆ ಗೊತ್ತಿರಲಿಲ್ಲ. ಇಂದು ನಾವೂ ದೊಡ್ಡ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬಹುದು ಎಂಬ ಆತ್ಮವಿಶ್ವಾಸ ಬಂದಿದೆ,” ಎಂಬ ಮಕ್ಕಳ ಮಾತುಗಳು ಅಲ್ಲಿದ್ದವರ ಮನಮುಟ್ಟಿದವು.

ಅಂದು ಬಿಡಿಎ ಕಚೇರಿಯಲ್ಲಿ ಕಡತಗಳ ವಿಲೇವಾರಿಗಿಂತ ಮಿಗಿಲಾಗಿ ಸಮಾನತೆ, ಪ್ರೀತಿ, ಆತ್ಮವಿಶ್ವಾಸ ಮತ್ತು ಭರವಸೆಯ ಸಂದೇಶ ಮೊಳಗಿತು. ಕಣ್ಣುಗಳಿಗೆ ದೃಷ್ಟಿ ಇಲ್ಲದಿದ್ದರೂ, ಭವಿಷ್ಯದ ದೊಡ್ಡ ಕನಸುಗಳನ್ನು ಕಾಣುವ ಶಕ್ತಿ ಈ ಮಕ್ಕಳಲ್ಲಿದೆ ಎಂಬುದನ್ನು ರಾಹುಲ್‌ನ ಆ ಒಂದು ನಗು ಸಾರಿ ಹೇಳಿತು.

KEY WORDS:

BDA Chairman N.A. Harris, Bengaluru Development Authority, visually impaired students, Jyothi Seva School for the Blind, One-Day BDA Chairman, Rahul visually impaired student, Bengaluru human interest story

Bengaluru Development Authority bda

English Summary
Title

BDA Chairman Seats Blind School Student in Official Chair as ‘One-Day Chairman’ in Bengaluru

Short Description
Bengaluru, Oct. 7, 2026: In a heartwarming gesture, Bengaluru Development Authority (BDA) Chairman N.A. Harris invited 65 visually impaired students from Jyothi Seva School for the Blind to the BDA office. He seated Rahul, a visually impaired student, in his official chair and symbolically made him the “One-Day BDA Chairman.” Harris encouraged the students to study with determination, pursue their dreams and aim for higher positions in society. BDA Commissioner Major P. Manivannan said the initiative aimed to build confidence and inspire the children to dream big, assuring continued support for their education and future.
Keywords
BDA Chairman N.A. Harris, Bengaluru Development Authority, visually impaired students, Jyothi Seva School for the Blind, One-Day BDA Chairman, Rahul visually impaired student, Bengaluru human interest story