Monday, October 5, 2026

BDA Apartments

Home Front Page ಯಾವ ಹೈಕಮಾಂಡ್ ನಿಂದಲೂ ನನಗೆ ನೋಟಿಸ್ ಬಂದಿಲ್ಲ- ಶಾಮನೂರು ಶಿವಶಂಕರಪ್ಪ.

ಯಾವ ಹೈಕಮಾಂಡ್ ನಿಂದಲೂ ನನಗೆ ನೋಟಿಸ್ ಬಂದಿಲ್ಲ- ಶಾಮನೂರು ಶಿವಶಂಕರಪ್ಪ.

ದಾವಣಗೆರೆ,ಅಕ್ಟೋಬರ್,6,10,2023(www.justkannada.in):  ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ  ಹೇಳಿಕೆ ಸಾಕಷ್ಟು ಸದ್ದು ಮಾಡುತ್ತಿದೆ. . ಸದ್ಯ ಈ ವಿಚಾರವಾಗಿ ಯಾವ ಹೈಕಮಾಂಡ್​​ನಿಂದಲೂ ನನಗೆ ನೋಟಿಸ್ ಬಂದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಸಿಎಂ ಸಿದ್ದರಾಮಯ್ಯ ಜೊತೆ ನಾನು ಮಾತನಾಡಿರುವುದನ್ನು ಹೇಳುವುದಕ್ಕೆ ಆಗುವುದಿಲ್ಲ. ಡಿಸೆಂಬರ್​​ 23, 24ರಂದು ಲಿಂಗಾಯತ ಮಹಾ ಅಧಿವೇಶನ ನಡೆಯುತ್ತದೆ. ಲಿಂಗಾಯತ ಮಹಾ ಅಧಿವೇಶನ ಶಕ್ತಿ ಪ್ರದರ್ಶನವಲ್ಲ. 10 ಲಕ್ಷಕ್ಕೂ ಹೆಚ್ಚು ಜನರು ಸೇರಿದರೆ ಅದು ಶಕ್ತಿ ಪ್ರದರ್ಶನ ಆಗಲಿದೆ ಎಂದರು.ಯಾವ ಹೈಕಮಾಂಡ್ ನಿಂದಲೂ ನನಗೆ ನೋಟಿಸ್ ಬಂದಿಲ್ಲ- ಶಾಮನೂರು ಶಿವಶಂಕರಪ್ಪ shamanur (1) sh...

ಸಮುದಾಯದ ಅಧಿಕಾರಗಳ ಪಟ್ಟಿ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಬೇಡಿ. ಜಾತಿ ಸಮೀಕ್ಷೆ ಬಗ್ಗೆ ಕೇಳಿದ್ದಕ್ಕೆ ಯಾವ ಜಾತಿ ಸಮೀಕ್ಷೆ ಇಲ್ಲ ಎಂದು  ಶಿವಶಂಕರಪ್ಪ ತಿಳಿಸಿದರು.

Key words: I have- not received – notice – high command – Shamanur Shivshankarappa.