Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಜೆಡಿಎಸ್ ರಾಷ್ಟ್ರೀಯ ಪದಾಧಿಕಾರಿಗಳು, ಕಾರ್ಯಕಾರಿ ಪಟ್ಟಿಯಲ್ಲಿ ಮಾಜಿ ಸಚಿವ ಜಿಟಿ ದೇವೇಗೌಡಗೆ ಕೋಕ್ !

ಜೆಡಿಎಸ್ ರಾಷ್ಟ್ರೀಯ ಪದಾಧಿಕಾರಿಗಳು, ಕಾರ್ಯಕಾರಿ ಪಟ್ಟಿಯಲ್ಲಿ ಮಾಜಿ ಸಚಿವ ಜಿಟಿ ದೇವೇಗೌಡಗೆ ಕೋಕ್ !

ಬೆಂಗಳೂರು, ಸೆಪ್ಟೆಂಬರ್ 02, 2019(www.justkannada.in): ಜೆಡಿಎಸ್’ನ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಪಟ್ಟಿ ಪ್ರಕಟವಾಗಿದ್ದು, ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಸಚಿವ ಜಿ ಟಿ ದೇವೇಗೌಡರಿಗೆ ಸ್ಥಾನ ನೀಡಿಲ್ಲ.

ಜತೆಗೆ ಜಿ ಟಿ ದೇವೇಗೌಡ ಬೆಂಬಲಿಗ ಶಾಸಕರಾದ ಅಶ್ವಿನ್, ಮಹದೇವುಗೂ ಸ್ಥಾನ ನೀಡಿಲ್ಲ. ಇನ್ನು ಮಾಜಿ ಸಚಿವ ಸಾ ರಾ ಮಹೇಶ್ ಗೆ ತೆನೆ ನಾಯಕರು ಮಣೆ ಹಾಕಿದ್ದಾರೆ. ಈ ಮೂಲಕ ಜೆ ಡಿ ಎಸ್ ನಾಯಕರಿಂದ ಜಿ ಟಿ ಡಿ ದೂರ ಹೋಗುತ್ತಿರುವುದು ಖಚಿತವಾಗಿದೆ.

ಮೈಸೂರು ಭಾಗದಲ್ಲಿ ಜಿಟಿ ದೇವೇಗೌಡರನ್ನು ಪಕ್ಷದ ನಾಯಕರು ಕಡೆಗಣಿಸಿದ್ದಾರೆ. ಬಿಜೆಪಿ ಮೇಲಿನ ಸಾಫ್ಟ್ ಕಾರ್ನರ್ ಹೇಳಿಕೆಗಳು ಜಿ ಟಿ ಡಿ ಗೆ ಮುಳುವಾಗಿದೆ ಎಂದು ಹೇಳಲಾಗಿದೆ. ಮುಂದೆ ಜಿಟಿಡಿ ಕಮಲ ಪಾಳಯ ಸೇರಲಿದ್ದಾರಾ? ಕಾದು ನೋಡಬೇಕಿದೆ.