Sunday, August 23, 2026

BDA Apartments

Home Front Page ಅರಮನೆಯಲ್ಲಿ ಇಂದು ಪಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ

ಅರಮನೆಯಲ್ಲಿ ಇಂದು ಪಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ

ಮೈಸೂರು, ಸೆಪ್ಟೆಂಬರ್ 02, 2019(www.justkannada.in): ಅರಮನೆಯಲ್ಲಿ ಇಂದು ಪಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಅರಮನೆಯ ಆನೆ ಬಾಗಿಲು ಬಳಿ ನಗರ ಪೊಲೀಸ್ ಆಯುಕ್ತರು ಕೆ. ಟಿ ಬಾಲಕೃಷ್ಣ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ಭಾವಚಿತ್ರಕ್ಕೆ ಹಾಗೂ ಪಿರಂಗಿ ಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ಪ್ರತಿ ವರ್ಷ ದಸರಾದಲ್ಲಿ 21 ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸುವುದು ಪ್ರತೀತಿ. ವಿಜಯದಶಮಿಯಂದು ಜಂಬೂ ಸವಾರಿ ಹೊರಡುವ ಸಂದರ್ಭದಲ್ಲಿ ಮತ್ತು ದೀವಟಿಗೆ ಸಲಾಮು ವೇಳೆ ಮೊದಲಿಗೆ ಗಣ್ಯರಿಗೆ ಗೌರವ ವಂದನೆ ಸಲ್ಲಿಸುವಾಗ ರಾಷ್ಟ್ರಗೀತೆ ನಡುವೆ 21 ಕುಶಲತೋಪು ಸಿಡಿಸುವುದು ವಾಡಿಕೆ. ಇದಕ್ಕಾಗಿ ಸಿಬ್ಬಂದಿ ನಾಳೆಯಿಂದ ಪಿರಂಗಿ ಪೂರ್ವಾಭ್ಯಾಸ ಮಾಡಲಿದ್ದಾರೆ.