Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Crime ಚಾಕು ಹಿಡಿದು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ ಬಂಧನ

ಚಾಕು ಹಿಡಿದು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ ಬಂಧನ

ನವದೆಹಲಿ, ಸೆಪ್ಟೆಂಬರ್ 02, 2019 (www.justkannada.in): ಚಾಕು ಹಿಡಿದು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಲಕ್ಷ್ಮೀನಗರ ಪ್ರದೇಶದ ಸಾಗರ್ (26) ಬಂಧಿತ. ಈತ ಬೆಳಿಗ್ಗೆ ಸುಮಾರು 10.45ರ ಸುಮಾರಿಗೆ ಚಾಕು ಹಿಡಿದುಕೊಂಡು ಸಂಸತ್‌ ಭವನದ 1ನೇ ನಂಬರ್‌ ಗೇಟ್ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಂಸತ್ ಒಳ ಪ್ರವೇಶಿಸಲು ಯತ್ನಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದರು. ಈ ಕೃತ್ಯದಲ್ಲಿ ಭದ್ರತಾ ಲೋಪ ಕಂಡುಬಂದಿಲ್ಲ’ ಎಂದು ನವದೆಹಲಿಯ ಡಿಸಿಪಿ ಈಶ್ ಸಿಂಘಲ್ ಹೇಳಿದ್ದಾರೆ.