Thursday, July 30, 2026

BDA Apartments

Home Front Page ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ- ಮಾಜಿ ಸಿಎಂ ಬಿಎಸ್ ವೈ.

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ- ಮಾಜಿ ಸಿಎಂ ಬಿಎಸ್ ವೈ.

ನವದೆಹಲಿ,ಸೆಪ್ಟಂಬರ್,13,2023(www.justkannada.in): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ವಿಚಾರ ಕುರಿತು ನನಗೆ ಸ್ಪಷ್ಟತೆ ಇಲ್ಲ. ಮೈತ್ರಿ ಬಗ್ಗೆ ಮಾತುಕತೆ ಆಗದೆ ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಮೈತ್ರಿ ಬಗ್ಗೆ ಮಾಹಿತಿ ಇಲ್ಲದೇ ಈ ಹಿಂದೆ ಹೇಳಿಕೆ ನೀಡಿದ್ದೆ. ಪ್ರಧಾನಿ ಮೋದಿ, ಅಮಿತ್ ಶಾರನ್ನ ದೇವೇಗೌಡರು ಭೇಟಿಯಾಗಿದ್ದಾರೆ ಮೈತ್ರಿಯಾಗಿದೆ ಎಂಬ ಕಲ್ಪನೆಯಲ್ಲಿ ಹೇಳಿದ್ದೆ. ದೇವೇಗೌಡರು ಮತ್ತು ಹೈಕಮಾಂಡ್ ಮಾತುಕತೆ ಬಳಿಕ ಮೈತ್ರಿ ಬಗ್ಗೆ ಪ್ರತಿಕ್ರಿಯಿಸುವೆ ಎಂದರು.

ಮೈತ್ರಿ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ನಿರ್ಧಾರ ಮಾಡ್ತಾರೆ. ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಅವರು ಎಂದು ಬಿಎಸ್ ವೈ ತಿಳಿಸಿದರು.

Key words: I am -not clear -about -BJP-JDS -alliance- Former CM- BS Yeddyurappa