Thursday, August 20, 2026

BDA Apartments

Home Front Page ನೀರು ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ – ಮಾಜಿ ಸಚಿವ ಅಶ್ವಥ್ ನಾರಾಯಣ್.

ನೀರು ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ – ಮಾಜಿ ಸಚಿವ ಅಶ್ವಥ್ ನಾರಾಯಣ್.

ಮಂಡ್ಯ, ಸೆಪ್ಟಂಬರ್,13,2023(www.justkannada.in):  ಕಾವೇರಿ ನೀರನ್ನು ಪಡೆಯುವಲ್ಲಿ ಕಾಂಗ್ರೆಸ್​​ ಸರ್ಕಾರ ಮೈಮರೆತಿದೆ. ನೀರು ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್​.  ಅಶ್ವಥ್ ನಾರಾಯಣ್ ಕಿಡಿಕಾರಿದರು.

ಇಂದು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್,  ಡಿಎಂಕೆ ಜೊತೆ ರಾಜ್ಯ ಕಾಂಗ್ರೆಸ್​ ಸರ್ಕಾರ ಕೈಜೋಡಿಸಿದೆ. ಕೋರ್ಟ್​ಗೆ ನೀರಿನ ಪರಿಸ್ಥಿತಿ ತಿಳಿಸಲು ಕಾಂಗ್ರೆಸ್​​ ಗೆ ಸಾಧ್ಯವಾಗಿಲ್ಲ. ನೀರು ಬಿಡುವ ಮುನ್ನ ಯಾಕೆ ಸರ್ವಪಕ್ಷದ ಸಭೆಯನ್ನು ಕರೆದಿಲ್ಲ ಎಂದು ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಕಾವೇರಿ ವಿಚಾರವಾಗಿ ದುರಂಕಾರದ ಮಾತು ಆಡಿದ್ದಾರೆ. ಸರ್ಕಾರಕ್ಕೆ ಕುಡಿಯುವ ನೀರು ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನೀರು ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು  ಅಶ್ವತ್ಥ್ ನಾರಾಯಣ್ ವಾಗ್ದಾಳಿ ನಡೆಸಿದರು.

Key words: Congress government- failed – water management – Former minister -Aswath Narayan.