Friday, August 14, 2026

BDA Apartments

Home Front Page ಹೆಸರು ಬದಲಾವಣೆಯಿಂದ ಏನು ಆಗಲ್ಲ: ಜನರಿಗೆ ಅನುಕೂಲ ಮಾಡಲಿ-ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್.

ಹೆಸರು ಬದಲಾವಣೆಯಿಂದ ಏನು ಆಗಲ್ಲ: ಜನರಿಗೆ ಅನುಕೂಲ ಮಾಡಲಿ-ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್.

ಬೆಂಗಳೂರು,ಸೆಪ್ಟಂಬರ್,6,2023(www.justkannada.in):  ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಾವಣೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಸಾಕಷ್ಟು ವರದಿಗಳು ಸದ್ದು ಮಾಡುತ್ತಿದೆ. ಈ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ಕೇವಲ ಹೆಸರು ಬದಲಾವಣೆ ಮಾಡೋದಲ್ಲ. ಬದುಕಿನಲ್ಲಿ ಏನಾದ್ರೂ ಬದಲಾವಣೆ ಆಗಬೇಕು. ಆದಾಯ ಡಬಲ್ ಮಾಡ್ತಿನಿ ಅಂದರು.  ಆಯ್ತಾ. ದೇಶದಲ್ಲಿ ಬೆಲೆ ಏರಿಕೆ ನಿಂತಿದೆಯಾ..? ಹೆಸರು ಬದಲಾವಣೆಯಿಂದ ಏನು ಆಗಲ್ಲ. ಜನರಿಗೆ ಅನುಕೂಲ ಆಗುವ ಕಾನೂನು ಮಾಡಲಿ. ಆಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ನುಡಿದರು.

Key words: india –name-changing –Bharath – DCM- DK Shivakumar