ಪ್ರಧಾನಿ ಮೋದಿಗೆ  ಪತ್ರ ಬರೆದ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ.

ನವದೆಹಲಿ,ಸೆಪ್ಟಂಬರ್,6,2023(www.justkannada.in): ಸೆಪ್ಟಂಬರ್ 18ರಿಂದ  ಐದು ದಿನಗಳ ಕಾಲ ವಿಶೇಷ ಅಧಿವೇಶನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಪತ್ರ ಬರೆದಿದ್ದಾರೆ.

ಅಧಿವೇಶನದಲ್ಲಿ ವಿಪಕ್ಷಗಳನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು. ಅಧಿವೇಷನದ ಅಜೆಂಡಾ ಏನು ಅಂತಾ ಗೊತ್ತಿಲ್ಲ. ಹೀಗಾಗಿ  ಸದನದಲ್ಲಿ ಸಾರ್ವಜನಿಕ ವಿಚಾರಗಳು  ಚರ್ಚೆಯಾಗಲಿ. ’ದೇಶದಲ್ಲಿ ಆರ್ಥಿಕ ಸ್ಥಿತಿ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗಲಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮಣಿಪುರ ರಾಜ್ಯದಲ್ಲಿ ಹಿಂಸಾಚಾರದ ಬಗ್ಗೆ ಚರ್ಚೆಯಾಗಲಿ ಹರಿಯಾಣ ಹಿಂಸಾಚಾರದ ಬಗ್ಗೆ ಚರ್ಚೆಯಾಗಲಿ ತುರ್ತಾಗಿ ಜಾತಿ ಗಣತಿ ನಡೆಸುವ ಬಗ್ಗೆ ಚರ್ಚೆಯಾಗಬೇಕು  ಕೇಂದ್ರ ಮತ್ತು ರಾಜ್ಯಗಳ ಸಂಬಂಧ, ದೇಶದ ಹಲವು ರಾಜ್ಯಗಳ ನೆರೆ ಮತ್ತು ಬರ ಕುರಿತು ಚರ್ಚೆಯಾಗಲಿ ಎಂದು ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.

Key words:  Congress leader -Sonia Gandhi -wrote – letter –PM  Modi.