ಈ ಬಾರಿ ಮಹಿಷಾ ದಸರಾ ಆಚರಣೆಗೆ ಸರ್ಕಾರದಿಂದ ಅನುಮತಿ ಇದೆ- ಮಾಜಿ ಮೇಯರ್ ಪುರುಷೋತ್ತಮ್

ಮೈಸೂರು,ಸೆಪ್ಟಂಬರ್,6,2023(www.justkannada.in): ಈ ಬಾರಿ ಮಹಿಷಾ ದಸರಾ ಆಚರಣೆಗೆ ಸರ್ಕಾರದಿಂದ ಅನುಮತಿ ಇದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ, ಈ ಬಾರಿ ಮಹಿಷಾ ದಸರಾ ಆಚರಣೆಗೆ ಸರ್ಕಾರದಿಂದ ಅನುಮತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ನಿಮ್ಮ ಧಾರ್ಮಿಕ ಆಚರಣೆಗೆ ಯಾರ ಅನುಮತಿಯ ಅವಶ್ಯಕತೆ ಇಲ್ಲ. ನಿಮ್ಮ ಪಾಡಿಗೆ ನೀವು ಮಾಡಿ ಎಂದು ಹೇಳಿದ್ದಾರೆ ಎಂದರು.

ಕೆಲವರು  ಮಹಿಷಾನ ಇತಿಹಾಸ ಗೊತ್ತಿಲ್ಲದವರು ಮಹಿಷಾ ದಸರಾಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇವರಿಗೆ ಉತ್ತರ ಕೊಡಲು ಮುಂದಿನ ಭಾನುವಾರ ಸೆಪ್ಟಂಬರ್ 10 ರಂದು  ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 25 ಕ್ಕೂ ಹೆಚ್ಚು ವಿದ್ವಾಂಸರು, ಇತಿಹಾಸ ತಜ್ಞರು ಆಗಮಿಸುತ್ತಾರೆ. ಮಾನಸಗಂಗೋತ್ರಿಯ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಮೂರು ಗೋಷ್ಠಿಗಳು ನಡೆಯುತ್ತದೆ. ಮತ್ತೊಂದು ದಿನ ಸಂವಾದ ನಡೆಯುತ್ತದೆ ಎಂದು ಪುರುಷೋತ್ತಮ್ ಮಾಹಿತಿ ನೀಡಿದರು.

ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟದಲ್ಲಿರುವ ಮಹಿಷನಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ನಮ್ಮ ಧಾರ್ಮಿಕ ಆಚರಣೆ ನಾವು ಮಾಡುತ್ತೇವೆ. ನಾವು ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಆಚರಣೆಗೆ ಯಾವುದೇ ಅಡ್ಡಿ ಇಲ್ಲ. ಚಾಮುಂಡಿಗೂ, ಮಹಿಷನಿಗೂ ಯಾವುದೇ ಸಂಬಂಧವಿಲ್ಲ ಎಂದು ಪುರುಷೋತ್ತಮ್ ತಿಳಿಸಿದರು.

Key words: Mahisha dasara-celebration – permission – government – former mayor- Purushottam