Friday, September 18, 2026

BDA Apartments

ಪರಿಷತ್ ಸದಸ್ಯರಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಪ್ರಮಾಣ ವಚನ ಸ...
Home Front Page ಪರಿಷತ್ ಸದಸ್ಯರಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಪ್ರಮಾಣ ವಚನ ಸ್ವೀಕಾರ

ಪರಿಷತ್ ಸದಸ್ಯರಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಆಗಸ್ಟ್ 31, 2023 (www.justkannada.in): ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ, ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭಾಪತಿಯವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಸಚಿವರು ಉಪಸ್ಥಿತರಿರಲಿದ್ದಾರೆ. 2023ರ ಮೇ 17ರಂದು ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್ ರಮೇಶ್ ನಾಮನಿರ್ದೇಶನ ಅವಧಿ ಮುಕ್ತಾಯವಾಗಿತ್ತು. ಜೂನ್ 8ರಂದು ಸಿ.ಎಂ.ಲಿಂಗಪ್ಪ ಸದಸ್ಯತ್ವ ಅವಧಿ ಮುಕ್ತಾಯವಾಗಿತ್ತು.

ಈ ಮೂರು ಸ್ಥಾನಕ್ಕೆ 20ಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಹೆಸರು ಅಂತಿಮಗೊಂಡಿತ್ತು.  2024ರ ಅಕ್ಟೋಬರ್‌ನಲ್ಲಿ ಮತ್ತೆರೆಡು ನಾಮನಿರ್ದೇಶನ ಸ್ಥಾನ ಖಾಲಿಯಾಗಲಿದೆ.