ಐಸಿಯುನಿಂದ ವಾರ್ಡ್​ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಶಿಫ್ಟ್.

ಬೆಂಗಳೂರು,ಆಗಸ್ಟ್,31,2023(www.justkannada.in): ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಐಸಿಯುನಿಂದ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ ಅವರು ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಐಸಿಯುನಿಂದ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳ ಕಾಲ ವೈದ್ಯರು ವಾರ್ಡ್​​ನಲ್ಲೇ ನಿಗಾ ವಹಿಸಲಿದ್ದಾರೆ. ಹೆಚ್​.ಡಿ.ಕುಮಾರಸ್ವಾಮಿ ನಿನ್ನೆಯಿಂದ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ ವಾರ್ಡ್​​ಗೆ ಶಿಫ್ಟ್ ಮಾಡಲಾಗಿದೆ.

Key words: Former CM-HD Kumaraswamy- shift – ICU to ward.