Saturday, August 1, 2026

BDA Apartments

Home Crime ಕಾರು ಡಿಕ್ಕಿ ಹೊಡೆದು ಕರ್ತವ್ಯನಿರತ ಪೌರ ಕಾರ್ಮಿಕನಿಗೆ ಗಂಭೀರ ಗಾಯ

ಕಾರು ಡಿಕ್ಕಿ ಹೊಡೆದು ಕರ್ತವ್ಯನಿರತ ಪೌರ ಕಾರ್ಮಿಕನಿಗೆ ಗಂಭೀರ ಗಾಯ

ಮೈಸೂರು, ಆಗಸ್ಟ್ 27, 08,2023 (www.justkannada.in): ಇಂದು ಬೆಳ್ಳಂಬೆಳಗ್ಗೆ ಕಾರು ಡಿಕ್ಕಿ ಹೊಡೆದು ಕರ್ತವ್ಯನಿರತ ಪೌರ ಕಾರ್ಮಿಕನಿಗೆ ಗಂಭೀರ ಗಾಯವಾಗಿದೆ.

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಮಹದೇವ 36 ಅಪಘಾತದಲ್ಲಿ ಗಾಯಗೊಂಡ ಪೌರ ಕಾರ್ಮಿಕ. ಅತಿ ವೇಗ ವಾಹನ ಚಾಲನೆ ವೇಳೆ ಚಾಲಕನ ಮೊಬೈಲ್ ಬಳಕೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

ಅಪಘಾತದಲ್ಲಿ ಪೌರಕಾರ್ಮಿಕನ ಕಾಲಿನ ಪಾದ ಬೇರ್ಪಟ್ಟಿದೆ. ಗಾಯಾಳು ಮಹದೇವ್‌ಗೆ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.