Saturday, September 12, 2026

BDA Apartments

Home Front Page ಮೋದಿ ಬೆಂಗಳೂರಿಗೆ ಬರಲಿ: ಅವರ ಭೇಟಿಗೆ ನಮ್ಮ ವಿರೋಧವಿಲ್ಲ- ಸಿಎಂ ಸಿದ್ಧರಾಮಯ್ಯ.

ಮೋದಿ ಬೆಂಗಳೂರಿಗೆ ಬರಲಿ: ಅವರ ಭೇಟಿಗೆ ನಮ್ಮ ವಿರೋಧವಿಲ್ಲ- ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಆಗಸ್ಟ್,25,2023(www.justkannada.in):  ಚಂದ್ರಯಾನ-3 ಯಶಸ್ವಿ ಹಿನ್ನೆಲೆ ವಿಜ್ಞಾನಿಗಳಿಗೆ ಅಭಿನಂದಿಸಲು ನಾಳೆ ಇಸ್ರೋ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ, ಮೋದಿ ಬೆಂಗಳೂರಿಗೆ ಬರಲಿ: ಅವರ ಭೇಟಿಗೆ ನಮ್ಮ ವಿರೋಧವಿಲ್ಲ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ,  ಮೋದಿಯವರು ಬೆಂಗಳೂರಿಗೆ ಬರಲು ನಮ್ಮ ವಿರೋಧವಿಲ್ಲ. ಮೋದಿಯವರು ರೋಡ್ ಶೋ ಆದರೂ ಮಾಡಲಿ. ಸಮಾವೇಶ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದರು.ಮೋದಿ ಬೆಂಗಳೂರಿಗೆ ಬರಲಿ siddaramaiah124

ಅಧಿಕಾರ ಹಾಗೂ ಸಂಪತ್ತು ಎರಡೂ ಬಲಾಢ್ಯರ ಕೈಯಲ್ಲಿ ಇರಬಾರದು. ಅಧಿಕಾರ ಮತ್ತು ಸಂಪತ್ತು ಸಮಾಜದ ಎಲ್ಲರ ಕೈಗಳಿಗೂ ಹಂಚಿಕೆಯಾಗಬೇಕು. ಇಲ್ಲವಾದರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಸಿಎಂ ಸಿದ‍್ಧರಾಮಯ್ಯ ಹೇಳಿದರು.

Key words:  Modi -come – Bangalore-  CM- Siddaramaiah.