Saturday, August 1, 2026

BDA Apartments

Home Front Page ಮಂಗಳೂರು ವಿವಿ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸಿ ರಾಜ್ಯ ಸರಕಾರದ ಆದೇಶ

ಮಂಗಳೂರು ವಿವಿ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸಿ ರಾಜ್ಯ ಸರಕಾರದ ಆದೇಶ

ಬೆಂಗಳೂರು, ಆಗಸ್ಟ್ 25, 2023 (www.justkannada.in): ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿ ರಚಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಮಂಗಳೂರು ವಿವಿ ಕುಲಪತಿಗಳ ಅಧಿಕಾರ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ನೂತನ ಕುಲಪತಿ ನೇಮಕಕ್ಕೆ ನಾಲ್ವರು ವಿಶ್ರಾಂತ ಕುಲಪತಿಗಳ ಶೋಧನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ವಿಶ್ರಾಂತ ಕುಲಪತಿಗಳಾದ ಪ್ರೊ.ಎ.ಎಚ್.ರಾಜಾ ಸಾಬ್ ಈ ಸಮಿತಿ ಅಧ್ಯಕ್ಷರಾಗಿದ್ದು, ಪ್ರೊ.ಗಂಗಾ ಪ್ರಸಾದ್ ಪ್ರಸೈನ್, ಪ್ರೊ.ಸುನೀಲ್ ಕುಮಾರ್, ಪ್ರೊ.ಟಿ.ವಿ.ಕಟ್ಟಿಮನಿ ಸದಸ್ಯರಾಗಿದ್ದಾರೆ. ಈ ಮೂವರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿ ಮೂವರ ಹೆಸರನ್ನು ಆಯ್ಕೆ ಮಾಡಿ ಅಂತಿಮವಾಗಿ ಸರಕಾರಕ್ಕೆ ಶಿಫಾರಸು ಮಾಡಲಿದೆ ಎಂದು ರಾಜ್ಯಸರಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.