Thursday, August 13, 2026

BDA Apartments

Home Front Page ಇಸ್ರೋ ಕಚೇರಿಗೆ ಭೇಟಿ ನೀಡಿ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದಿಸಿದ ಸ್ಪೀಕರ್ ಯುಟಿ ಖಾದರ್.

ಇಸ್ರೋ ಕಚೇರಿಗೆ ಭೇಟಿ ನೀಡಿ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದಿಸಿದ ಸ್ಪೀಕರ್ ಯುಟಿ ಖಾದರ್.

ಬೆಂಗಳೂರು, ಆಗಸ್ಟ್, 24, 2023(www.justkannada.in): ಇಸ್ರೋದ ಐತಿಹಾಸಿಕ ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆ ಇಂದು ಇಸ್ರೋ ಕಚೇರಿಗೆ ವಿಧಾನಸಭೆಸ ಸ್ಪೀಕರ್ ಯು.ಟಿ ಖಾದರ್ ಭೇಟಿ ನೀಡಿ ಇಸ್ರೋ ಅಧ್ಯಕ್ಷ ಸೋಮನಾಥ್ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪೀಣ್ಯದಲ್ಲಿನ ಇಸ್ರೋದ ISTRAC ಕೇಂದ್ರಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ ನೀಡಿ ಇಸ್ರೋ ಅಧ್ಯಕ್ಷ ಸೋಮನಾಥ್ ಹಾಗೂ ವಿಜ್ಞಾನಿಗಳಿಗೆ ಶಾಲು ಹೊದಿಸಿ ಅಭಿನಂದಿಸಿದರು.

ಬಳಿಕ ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಭಾರತಕ್ಕೆ ಇದೊಂದು ಐತಿಹಾಸಿಕ ದಿನ.  ವರಮಹಾಲಕ್ಷ್ಮಿ ಹಬ್ಬಕ್ಕೆ  ಇದು ಬಹುದೊಡ್ಡ ಕೊಡುಗೆ.  ಚಂದ್ರಯಾನ-3ಕ್ಕೆ ಶ್ರಮಿಸಿದ ಇಸ್ರೋ ಅಧ್ಯಕ್ಷರು, ವಿಜ್ಞಾನಿಗಳು ಅಭಿನಂಧನೆ ಸಲ್ಲಿಸುತ್ತೇನೆ ಎಂದರು.

Key words: Speaker -UT Khader -visit – ISRO office – congratulated – President – scientists.