ಚಿರತೆ ದಾಳಿಯಿಂದ 3 ವರ್ಷದ ಮಗು ಸಾವು ಆರೋಪ: ಗ್ರಾಮಸ್ಥರ ಪ್ರತಿಭಟನೆ: ಸ್ಥಳಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಭೇಟಿ.

ಚಾಮರಾಜನಗರ,ಆಗಸ್ಟ್,24,2023(www.justkannada.in): ಚಿರತೆ ದಾಳಿಯಿಂದ 3 ವರ್ಷದ ಮಗು ಸಾವನ್ನಪ್ಪಿರುವುದಾಗಿ ಆರೋಪಿಸಿ ಚಾಮರಾಜನಗರ ಜಿಲ್ಲೆ ಯರಿಯೂರಿನ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಯಳಂದೂರಿನ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದರು.  ಕಳೆದ ವಾರ ಯರಿಯೂರು ಗ್ರಾಮದಲ್ಲಿ ಪ್ರಾಣಿ ದಾಳಿಯಿಂದ ರುಕ್ಮಿಣಿ ಎಂಬ ಮಗು ಗಾಯಗೊಂಡಿತ್ತು.

ನಿನ್ನೆ  ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ರುಕ್ಮಿಣಿ ಎಂಬ ಮಗು ಸಾವನ್ನಪ್ಪಿತ್ತು. ಇನ್ನು ಪ್ರತಿಭಟನಾ ಸ್ಥಳಕ್ಕೆ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Key words: Alleged -death -3-year-old child – leopard- attack- protest- MLA Puttarangashetty-visits