ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ  ಡಿಡಿಪಿಯು ಕಚೇರಿ ಸಿಬ್ಬಂದಿ.

ಧಾರವಾಡ,ಆಗಸ್ಟ್,24,2023(www.justkannada.in): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ  ಡಿಡಿಪಿಯು ಕಚೇರಿ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡಲ್ಲಿ ನಡೆದಿದೆ.

ಡಿಡಿಪಿಯು ಕಚೇರಿ ಸೆಕ್ಷನ್ ಆಧಿಕಾರಿ ದುರ್ಗದಾಸ್ ಮಸೂತಿ ಹಾಗೂ ಡಿಡಿಪಿಯು ಎಫ್​ಡಿಎ ಸಹಾಯಕ ನಾಗರಾಜ್ ಹೂಗಾರ್​ ಅವರು  ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿಗಳು. ಕಚೇರಿಯಲ್ಲೇ 15 ಸಾವಿರ ರೂ. ಲಂಚ ಸ್ವೀಕರಿಸುವಾಗ ದಾಳಿ ಮಾಡಲಾಗಿತ್ತು.

ನಿವೃತ್ತ ಉಪನ್ಯಾಸಕ ಸುಭಾಷ್ ಚವರೆಡ್ಡಿ ಎಂಬುವವರಿಂದ ಪಿಂಚಣಿ ನೀಡಲು ದಾಖಲೆ ಸರಿಪಡಿಸಿಕೊಡಲು 15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

Key words: DDPU- office- staff – Lokayukta- trap -Accepting bribe.