Sunday, August 9, 2026

BDA Apartments

Home Front Page ನಾಡಹಬ್ಬ ಮೈಸೂರು ದಸರಾಗೆ ಸಂಪೂರ್ಣ ಸಹಕಾರ ನೀಡ್ತೇನೆ ಎಂದ  ‘ಕೈ’ ಶಾಸಕ…

ನಾಡಹಬ್ಬ ಮೈಸೂರು ದಸರಾಗೆ ಸಂಪೂರ್ಣ ಸಹಕಾರ ನೀಡ್ತೇನೆ ಎಂದ  ‘ಕೈ’ ಶಾಸಕ…

ಮೈಸೂರು,ಆ,31,2019(www.justkannada.in):  ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ನಾನು  ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಇಂದು ಬನ್ನಿಮಂಟಪ‌ ಪಂಜಿನ ಕವಾಯತು ಮೈದಾನದಲ್ಲಿ ಸಚಿವ ವಿ. ಸೋಮಣ್ಣ  ಅವರನ್ನ ಶಾಸಕ ತನ್ವೀರ್ ಸೇಠ್ ಭೇಟಿಯಾದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ತನ್ವೀರ್ ಸೇಠ್, ಮೈಸೂರಿನ‌ ಇಡೀ‌ ಪ್ರವಾಸೋದ್ಯಮ ದಸರಾ ಅವಲಂಬಿಸಿದೆ. ವರ್ಷಕ್ಕೊಮ್ಮೆ ದಸರಾ ಅದ್ದೂರಿಯಾಗಿ ನಡೆದರೆ ಇಡೀ ವರ್ಷ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತದೆ ಎಂದರು.

ಹಾಗೆಯೇ ಮೈಸೂರು ದಸರಾ ಆಚರಣೆ ವಿಚಾರದಲ್ಲಿ ರಾಜಕೀಯ ಬರಲ್ಲ. ದಸರಾ ಆಚರಣೆಗೆ ನಾನು ಸಚಿವ ಸೋಮಣ್ಣ ಅವರಿಗೆ ಸಂಪೂರ್ಣ ಸಹಕಾರ ನೀಡುವೆ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: Congress -MLA-  full -cooperation – Mysore Dasara.