Sunday, August 9, 2026

BDA Apartments

Home Front Page ಕೇಂದ್ರ ತಂಡ ವರದಿ ಬಳಿಕ ಪರಿಹಾರ ಬಿಡುಗಡೆ: ಇಡಿಯಿಂದ ಡಿಕೆ ಶಿವಕುಮಾರ್ ವಿಚಾರಣೆ ಕುರಿತು ಪ್ರತಿಕ್ರಿಯಿಸಲು...

ಕೇಂದ್ರ ತಂಡ ವರದಿ ಬಳಿಕ ಪರಿಹಾರ ಬಿಡುಗಡೆ: ಇಡಿಯಿಂದ ಡಿಕೆ ಶಿವಕುಮಾರ್ ವಿಚಾರಣೆ ಕುರಿತು ಪ್ರತಿಕ್ರಿಯಿಸಲು ಸಿಎಂ ಬಿಎಸ್ ಯಡಿಯೂರಪ್ಪ ನಕಾರ…

ಶಿವಮೊಗ್ಗ,ಆ,31,2019(www.justkannada.in):  ರಾಜ್ಯ ನೆರೆ ಹಾವಳಿ ಬಗ್ಗೆ ಕೇಂದ್ರ ಅಧಿಕಾರಿಗಳ ತಂಡ  ಪರಿಶೀಲನೆ ನಡೆಸಿದ್ದು ವರದಿ ಬಳಿಕ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸೆಪ್ಟೆಂಬರ್ 7 , 8ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರ್ತಾರೆ. ರಾಜಭವನದಲ್ಲಿ ಈಗಾಗಲೇ ಚರ್ಚೆಯಾಗಿದೆ. ಬ್ಲೂ ಪ್ರಿಂಟ್ ಮೂಲಕ ಹಾನಿ ಕುರಿತು ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಕೇಂದ್ರ ತಂಡ ವರದಿ ನೀಡಿದ ಬಳಿಕ ಪರಿಹಾರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ನೆರೆ ಸಂತ್ರಸ್ತರಿಗಾಗಿ.  10 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು.  ಶಿವಮೊಗ್ಗ ದಸರಾಗೆ 2 ಕೋಟಿ ಅನುದಾನ ನೀಡಲಾಗುತ್ತದೆ. ನೆರೆ ಪೀಡಿತ ಜಿಲ್ಲೆಗಳಿಗೆ 500 ಕೋಟಿ ರೂ ಹಣ ನೀಡುತ್ತೆವೆ ಎಂದರು.

ಡಿಕೆಶಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

Key words: Release –relief found-Central Team- Report- CM BS Yeddyurappa