ದಸರಾ‌ ಮಹೋತ್ಸವದ ಸಿದ್ದತಾ ಕಾರ್ಯ ಗಳಿಂದ ದೂರ ಉಳಿದ್ರಾ ಶಾಸಕರ ಎಸ್.ಎ ರಾಮದಾಸ್..?

ಮೈಸೂರು,ಆ,31,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಖುದ್ಧು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗಿ ಸಿದ್ಧತಾ ಕಾರ್ಯಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ.

ಆದರೆ ಮೈಸೂರಿನ ಪ್ರಭಾವಿ ಬಿಜೆಪಿ ಶಾಸಕರಾದ ಎಸ್,ಎ ರಾಮದಾಸ್ ಮಾತ್ರ ದಸರಾ‌ ಮಹೋತ್ಸವದ ಸಿದ್ದತಾ ಕಾರ್ಯ ಗಳಿಂದ ದೂರವೇ ಉಳಿದಿದ್ದಾರೆ ಎನ್ನಲಾಗಿದೆ. ಹೌದು ದಸರಾ ಕಾರ್ಯಕಾರಿ ಸಮಿತಿ ಸಭೆಗೆ ಹಾಗೂ ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಗೈರಾಗಿದ್ದ  ಶಾಸಕ ಎಸ್.ಎ ರಾಮದಾಸ್ ನಿನ್ನೆ ಸಿಎಂ ಬಿಎಸ್ ವೈ ಮೈಸೂರಿಗೆ ಬಂದಾಗ ಕಾಣಿಸಿಕೊಂಡಿದ್ದರು. ಆದರೆ ಇದೀಗ ಸಚಿವ ವಿ.‌ಸೋಮಣ್ಣ ಅವರು ನಗರ ಸಂಚಾರ ಹಾಕಿ ಸಮಸ್ಯೆ ಪರಿಶೀಲಿಸಿದರೂ ಶಾಸಕ ರಾಮದಾಸ್ ಸಿಟಿರೌಂಡ್ಸ್ ಗೆ  ಆಗಮಿಸಲಿಲ್ಲ.

ದಸರಾ ಮಹೋತ್ಸವ ಹಿನ್ನೆಲೆ ಇಂದು ಸಚಿವ ವಿ.ಸೋಮಣ್ಣ ಸಿಟಿ ರೌಂಡ್ಸ್ ಹಾಕಿ ಪರಿಶೀಲಿಸಿದರು. ಹಾಗೆಯೇ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಖುದ್ದು ಹೆಜ್ಜೆ ಹಾಕಿ ಸಮಸ್ಯೆ ವೀಕ್ಷಿಸಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ಸಾಥ್ ನೀಡಿದ್ದರು. ಆದರೆ  ಸಚಿವ ವಿ.ಸೋಮಣ್ಣ ಸಿಟಿ ರೌಂಡ್ಸ್ ಗೆ ಶಾಸಕ ಎಸ್.ಎ ರಾಮದಾಸ್ ಮಾತ್ರ ಗೈರಾಗಿದ್ದರು.

ಸ್ವಕ್ಷೇತ್ರ ಕೆ.ಆರ್. ಕ್ಷೇತ್ರದ ವ್ಯಾಪ್ತಿಯಲ್ಲೇ ಸಚಿವರು ಪರಿಶೀಲನೆ ನಡೆಸಿದರೂ ಶಾಸಕ ರಾಮದಾಸ್ ಹಾಜರಾಗಿರಲಿಲ್ಲ. ಸಚಿವ ವಿ. ಸೋಮಣ್ಣ ಅವರಿಗೆ ವಿಪಕ್ಷ ಶಾಸಕರಿಂದಲೇ ಬೆಂಬಲ ನೀಡುತ್ತಿದ್ದಾರೆ. ದಸರಾ ಆಚರಣೆ ಉತ್ತಮವಾಗಿ‌ ನಡೆಯಲಿ ಎಂದು  ವಿಪಕ್ಷ ಶಾಸಕರು ಆಶಯ ವ್ಯಕ್ತಪಡಿಸಿದರೇ ಸ್ವ ಪಕ್ಷೀಯ ಶಾಸಕರೇ ಸಚಿವರಿಗೆ ಸಹಕಾರ ನೀಡುತ್ತಿಲ್ಲವೆ ಎಂಬ ಪ್ರಶ್ನೆ ಮೂಡಿದೆ.

ಶೋಭಾ‌‌ ಕರಂದ್ಲಾಜೆ ಸಚಿವರಾಗಿದ್ದ ಅವಧಿಯಲ್ಲೂ ದಸರೆಯಿಂದ ಶಾಸಕ ರಾಮದಾಸ್ ದೂರ ಉಳಿದಿದ್ದರು. ಇದೀಗ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ರಾಮದಾಸ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

Key words: mysore- MLA- SA Ramadas – away-dasara -Preparation work