Wednesday, August 5, 2026

BDA Apartments

Home Front Page ತಾಲ್ಲೂಕು ಆಸ್ಪತ್ರೆಗೆ ಸಚಿವ ಆರ್.ಬಿ ತಿಮ್ಮಾಪುರ ದಿಢೀರ್ ಭೇಟಿ: ವೈದ್ಯರಿಗೆ ತರಾಟೆ.

ತಾಲ್ಲೂಕು ಆಸ್ಪತ್ರೆಗೆ ಸಚಿವ ಆರ್.ಬಿ ತಿಮ್ಮಾಪುರ ದಿಢೀರ್ ಭೇಟಿ: ವೈದ್ಯರಿಗೆ ತರಾಟೆ.

ಬಾಗಲಕೋಟೆ,ಆಗಸ್ಟ್,16,2023(www.justkannada.in): ಸಚಿವ ಆರ್.ಬಿ ತಿಮ್ಮಾಪುರ ಇಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರನ್ನ ತರಾಟೆ ತೆಗೆದುಕೊಂಡರು.

ರೋಗಿಗಳಿಗೆ ಸರಿಯಾಗಿ ಉಪಾಹಾರ ನೀಡದ ಬಗ್ಗೆ ದೂರು ಬಂದ ಹಿನ್ನೆಲೆ ಬೆಳಗ್ಗೆ ಮುಧೋಳ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವ ಆರ್.ಬಿ ತಿಮ್ಮಾಪುರ,  ವೈದ್ಯರು, ಅಡುಗೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

ರೋಗಿಗಳಿಗೆ, ಬಾಣಂತಿಯರಿಗೆ ಉತ್ತಮ ಆಹಾರ ನೀಡಬೇಕು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು ಇಲ್ಲದಿದ್ದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Key words: Minister- RB Thimmapura – sudden visit – taluk hospital-bagalkot