Wednesday, July 29, 2026

BDA Apartments

Home Front Page ಮತ್ತೆ ಪ್ರಧಾನಿ ಮೋದಿ ಗುಣಗಾನ ಮಾಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ..

ಮತ್ತೆ ಪ್ರಧಾನಿ ಮೋದಿ ಗುಣಗಾನ ಮಾಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ..

ಮೈಸೂರು,ಆ,30,2019(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪದೇ ಪದೇ ಹೊಗಳುತ್ತಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ,ಟಿ ದೇವೇಗೌಡರು ಇದೀಗ ಮತ್ತೆ ಗುಣಗಾನ ಮಾಡಿದ್ದಾರೆ.

ನರೇಂದ್ರ ಮೋದಿ ಅವ್ರು ದೇಶದ ವ್ಯಕ್ತಿ. ಅಂಥಹವರು ದೇಶಕ್ಕೆ ಬೇಕು. ಅವರು ದೇಶದ ಅಭಿವೃದ್ಧಿಯತ್ತ  ನೋಡುತ್ತಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಪ್ರಧಾನಿ ಮೋದಿ ಅವರನ್ನ ಹೊಗಳಿದ್ದಾರೆ.

ಬೆಳ್ಳಂಬೆಳಿಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ  ಜೊತೆ ಕಾಣಿಸಿಕೊಂಡ ಜಿ ಟಿ ದೇವೇಗೌಡರು. ಈ ವೇಳೆ ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ನರೇಂದ್ರ ಮೋದಿ ಅವ್ರು ದೇಶದ ವ್ಯಕ್ತಿ. ಮೊದಲು ದೇಶ ನಂತ್ರ ಬೇರೆಲ್ಲಾ ಎಂಬ ಭಾವನೆ ಇರುವವರು. ಅವರ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಒಂದು ಒಳ್ಳೆ ಮಾತಾಡಿದ್ರೆ ಬಿಜೆಪಿ ಅಂತಾ ಹೇಳ್ತಾರೆ . ನಾನು ಎಲ್ಲೂ ಹೋಗಲ್ಲ  ಜೆಡಿಎಸ್ ನಲ್ಲೆ  ಇರ್ತೇನೆ ಎಂದು ಸ್ಪಷ್ಟನೆ ನೀಡಿದರು.

ವಿ ಸೋಮಣ್ಣ ಜೊತೆ ಒಡನಾಟದ ಬಗ್ಗೆ ವಿಶ್ಲೇಷಣೆ ನೀಡಿದ ಜಿಟಿ ದೇವೇಗೌಡ, ನಾನು ಸೋಮಣ್ಣ ಬಹಳ ಹಿಂದಿನ ಸ್ನೇಹಿತರು.. ಇದು ಕಾಕತಾಳೀಯ. ಈಗ ಅವರೇ ಉಸ್ತುವಾರಿ ಸಚಿವರಾಗಿದ್ದಾರೆ. ಅವರ ನನ್ನ ಸ್ನೇಹ ಚೆನ್ನಾಗಿದೆ. ದಸರಾ ಬಗ್ಗೆ ನನ್ನ ಸಲಹೆ ಕೇಳಿದ್ರು ಅಷ್ಟೇ ಎಂದು ಜಿ.ಟಿ ದೇವೇಗೌಡರು ತಿಳಿಸಿದರು,

Key words: Former minister -GT Deve Gowda -again – Praise-PM Modi.