Friday, October 30, 2026

Dasara Wishes

Happy Dasara
Home Front Page ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್:  FDA, SDA 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್:  FDA, SDA 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: FDA, SDA 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಬೆಂಗಳೂರು, ಅಕ್ಟೋಬರ್,30,2026 (www.justkannada.in):  ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು  ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಅಧಿಸೂಚನೆ ಹೊರಡಿಸಿದ್ದು  ಅಕ್ಟೋಬರ್​ 30 ಇಂದಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರಂಭವಾಗಲಿದೆ.  ನವೆಂಬರ್ 25 ಅರ್ಜಿ ಸಲ್ಲಿಕೆಗೆ ಮತ್ತು ನವೆಂಬರ್ 26 ಶುಲ್ಕ ಪಾವತಿಸಲು ಕಡೇ ದಿನವಾಗಿದೆ .

ಉಳಿಕ ಮೂಲ ವೃಂದಕ್ಕೆ ಸಂಬಂಧಿಸಿದಂತೆ 2,163 ಪ್ರಥಮ ದರ್ಜೆ ಹಾಗೂ 2,070 ದ್ವಿತೀಯ ದರ್ಜೆಯ ಹಾಗೂ‌ ಕಲ್ಯಾಣ ಕರ್ನಾಟಕ ವೃಂದದ 563 ಎಫ್​ಡಿಎ ಹಾಗೂ 635 ಎಸ್​ಡಿಎ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ.

ಈ ಹುದ್ದೆಗಳಿಗೆ 2027ರ ಜನವರಿ 8, 9, 10, 16 ಮತ್ತು 17ರಂದು ಪರೀಕ್ಷೆ  ನಡೆಯಲಿದೆ. ಉದ್ಯೋಗಾಕಾಂಕ್ಷಿಗಳು ಎಫ್​ಡಿಎಗೆ ಪದವಿ ಮತ್ತು ಎಸ್​ಡಿಎಗೆ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿರಬೇಕು. ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: FDA, SDA 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 35 ವರ್ಷವಾಗಿದೆ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.Good news exam

ಈ ಹುದ್ದೆಗಳಿಗೆ ಕೆಇಎ ಅಧಿಕೃತ ಜಾಲತಾಣದ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕದ ಕುರಿತು ಮಾಹಿತಿಗಳಿಗೆ ವಿವರವಾದ ಅಧಿಕೃತ ಅಧಿಸೂಚನೆ ಪರಿಶೀಲಿಸಿಕೊಳ್ಳಬೇಕು. ಹುದ್ದೆಗಳಿಗೆ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ವಿವರಗಳಿಗೆ ಪ್ರಾಧಿಕಾರದ ವೆಬ್​ಸೈಟ್ ನೋಡುವಂತೆ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.job seekers jk02_new jk02 new

Good news, job seekers,  Notification, fill , FDA , SDA, posts.

English Summary
Title

KEA Recruitment 2026: Apply Online for 5,431 FDA, SDA & Group C Posts

Short Description
The Karnataka Examination Authority (KEA) has released a massive job notification for 5,431 FDA, SDA, and Group C posts across 33 government departments and boards. This major KEA recruitment 2026 drive includes vacancies for First Division Assistants (FDA) and Second Division Assistants (SDA) under both Residual Parent Cadre (RPC) and Kalyana Karnataka (KK) cadres. Eligible candidates with a Degree or PUC qualification can submit their KEA online application via the official website from October 30 to November 25, 2026. The competitive exams are tentatively scheduled for January 2027. Don't miss this opportunity to secure a lucrative government job in Karnataka.
Keywords
Good news, job seekers, Notification, fill, FDA, SDA, posts.