ಬೆಂಗಳೂರು,ಅಕ್ಟೋಬರ್,30,2026 (www.justkannada.in): ಸಚಿವ ಸ್ಥಾನ ಕೈತಪ್ಪಿದ ಬಳಿಕ ಕಾಂಗ್ರೆಸ್ ನಾಯಕ ಹೆಚ್.ಸಿ ಮಹದೇವಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುನಿಸು ಉಂಟಾಗಿದೆ ಎಂದು ವರದಿಯಾಗುತ್ತಿದ್ದು ಈ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ನಿನ್ನೆ ಸಭೆಗೆ ನನಗೆ ಆಹ್ವಾನ ಇರಲಿಲ್ಲ ಹಾಗಾಗಿ ಹೋಗಿಲ್ಲ ಏನೇ ಆದರೂ ನಾವೆಲ್ಲರೂ ಒಂದೇ ಅಲ್ವಾ? ದಾರಿ 101 ಆದರೂ ವಿಚಾರ ಒಂದೇ ಆಗಿರುತ್ತದೆ ಎಂದರು.
ಎಷ್ಟೋ ದಾರಿ ಬೇರೆ ಇರಬಹುದು ಆದರೆ ಅಹಿಂದ ಬ್ಲಡ್ ಒಂದೇ. ದಾರಿ ನೂರಾದರೂ ಗುರಿ ಒಂದೇ ಹೇಗೆ ಬಂದರೂ ಬೆಂಗಳೂರಿಗೆ ಬರಬೇಕಲ್ವೇ ಯಾರು ಲೀಡರ್ ಶಿಪ್ ತೆಗದುಕೊಳ್ಳುತ್ತಾರೋ ಅವರೇ ಅಹಿಂದ ನಾಯಕ. ಹಿಂದೆ ಸಿದ್ದರಾಮಯ್ಯ ಇದ್ದರು, ಮುಂದೆ ನೋಡೋಣ. ಅಹಿಂದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಸಮಯ ನಿಗದಿಯಾಗಿಲ್ಲ ಎಂದರು.
Minister, Satish Jarkiholi, rift, between Siddaramaiah, HC Mahadevappa







